ಜೆಡಿಎಸ್ ಶಾಸಕನ ಸಹೋದರನಿಗೆ ಟ್ರಾನ್ಸ್'ಫರ್ ಬೆದರಿಕೆ ಹಾಕಿದ ಎ. ಮಂಜು

Published : Oct 13, 2016, 04:39 AM ISTUpdated : Apr 11, 2018, 12:45 PM IST
ಜೆಡಿಎಸ್ ಶಾಸಕನ ಸಹೋದರನಿಗೆ ಟ್ರಾನ್ಸ್'ಫರ್ ಬೆದರಿಕೆ ಹಾಕಿದ ಎ. ಮಂಜು

ಸಾರಾಂಶ

ಸಚಿವರಿಂದ ಜೆಡಿಎಸ್ ಶಾಸಕನ ಸಹೋದರನಿಗೆ 'ಟ್ರಾನ್ಸ್'ಫರ್' ಬೆದರಿಕೆ ಸೇಡಿನ ರಾಜಕೀಯ ನಡೆಯುತ್ತಿದೆಯೇ ಹಾಸನದಲ್ಲಿ? ಸ್ವಯಂ ನಿವೃತ್ತಿ ಪಡೆದ ಅಧಿಕಾರಿ | ಸಚಿ ವ ಮಂಜು ಫೋನಿನಲ್ಲಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಸಂಭಾಷಣೆ

ಬೆಂಗಳೂರು (ಅ.13): ಪಶುಸಂಗೋಪನಾ ಸಚಿವ ಎ.ಮಂಜು ಅಧಿಕಾರಿಯೊಬ್ಬರಿಗೆ ದೂರದ ಊರಿಗೆ ವರ್ಗಾವಣೆ ಮಾಡುವ ಬೆದರಿಕೆ ಹಾಕಿರುವ ಬೆನ್ನಲ್ಲೇ ಸಚಿವರ ಆರೋಪದಿಂದ ನೊಂದಿರುವ ಅಧಿಕಾರಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ಘಟನೆ ನಡೆದಿದೆ.

ಸಚಿವರು ಕರೆಮಾಡಿ ಮಾತನಾಡಿರುವ ಆಡಿಯೋ ಕ್ಲಿಪ್ ಸುವರ್ಣ ನ್ಯೂಸ್'ಗೆ ದೊರಕ್ಕಿದ್ದು, ಸಚಿವರು ಪಶು-ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ದಾಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಮೋಹನ್ ದಾಸ್ ಆರೋಪಗಳನ್ನು ನಿರಾಕರಿಸಿದ್ದಾರಲ್ಲದೇ ಸಚಿವರ ಆರೋಪಗಳಿಂದ ನೊಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.  

ಮೋಹನ್ ದಾಸ್, ಜೆಡಿಎಸ್ ಶಾಸಕ ಪ್ರಕಾಶ ಅವರ ಸಹೋದರರಾಗಿದ್ದು, ಈ ಬೆಳವಣಿಗೆಯು ಕಾಂಗ್ರೆಸ್ -ಜೆಡಿಎಸ್ ನಡುವಿನ ಸೇಡಿನ ರಾಜಕೀಯದ ಮುಂದುವರಿದ ಭಾಗವೇ ಎಂಬ ಸಂಶಯಗಳು ಮೂಡಿವೆ.

ಮಂಜು ಹಾಗೂ ಮೋಹನ್ ದಾಸ ಸಂಭಾಷಣೆ ಇಲ್ಲಿದೆ:

ಎ ಮಂಜು : ಹಲೋ ಮೋಹನ್ ದಾಸ್

ಅಧಿಕಾರಿ :  ಸರ್

ಎ ಮಂಜು : ಮಂತ್ರಿಗಳು ಮಾತಾಡೋದು

ಅಧಿಕಾರಿ : ಹು ಸರ್ ಗೊತ್ತಾಯಿತು ಸರ್

ಎ ಮಂಜು : ಎಲ್ಲಿದಿಯಾ ಪಾ...

ಅಧಿಕಾರಿ : ಇಲ್ಲೆ ಮನೆ ಹತ್ತಿರ ಇದ್ದೇ

ಎ ಮಂಜು : ಕಾರ್ಯಕ್ರಮಕ್ಕೆ  ಬಂದಿದ್ದೇಯಾ

ಅಧಿಕಾರಿ : ಸರ್

ಎ ಮಂಜು : ಪಾಲಿಗ್ರಾಮ ಕಾರ್ಯಕ್ರಮಕ್ಕೆ ಬಂದಿದ್ದೇಯಾ

ಅಧಿಕಾರಿ : ಹು ಸರ್ ಬಂದಿದೆ

ಎ ಮಂಜು : ಎನ್ ಎಲ್ಲಾ ಬಂದೊರು ನಿನ್ನ ಬಗ್ಗೆ ಕಂಪ್ಲೇಟ್ ನೀಡತ್ತಾ ಇದ್ದಾರೆ, ಎಲ್ಲರ ಹತ್ತಿರ ಮಾತ್ತಾಡಿ ದುಡ್ಡು ವಸೂಲಿ ಮಾಡತೀಯಾ ಅಂತೇ 

ಅಧಿಕಾರಿ : ಸರ್

ಎ ಮಂಜು : ಮೇರಿಟಸ್ರಗೆ ಎಲ್ಲಾ ಮಾತಾಡಿ ದುಡ್ಡು ತಗ್ಗೋಳ್ತಿಯ ಅಂತ ಚಿಟಿ ಬರೆದುಕೊಟ್ಟಿದ್ದಾರೆ ಅಲ್ಲಪಾ

ಅಧಿಕಾರಿ : ಹೌದಾ ಸರ್ , ನನಗೆ ಗೊತ್ತಿಲ್ಲಾ ಸರ್

ಎ ಮಂಜು : ಹೌದು

ಅಧಿಕಾರಿ : ಹೌದಾ ಸರ್ ಹ ಹ ಹ

ಎ ಮಂಜು : ಎನ್ ಈಗ ಎನಕ್ವೈರಿಗೆ ಹಾಕೊದಾ ಎನ್ ಮಾಡೊದು

ಅಧಿಕಾರಿ : ನನಗೆ ಯಾರು ಚೀಟಿ ಬರೆದು ಕೊಟ್ಟಿದ್ದಾರೆ ಅಂತಾ ಗೊತ್ತಾಗಲ್ಲಿಲ್ಲ ಸರ್

ಎ ಮಂಜು : ಯಾರೂ ಬರೆದು ಕೊಟ್ಟಿದ್ದಾರೆ ಅಂತಾ ಹೇಳಿದ್ದರೆ ನೀನು ಸಾಯಂಕಲಾ ಬುಕ್ ಮಾಡಿಕೊಳ್ಳುತ್ತಿಯಾ ಅವರನ್ನು

ಅಧಿಕಾರಿ : ಇಲ್ಲಾ ಸರ್

ಎ ಮಂಜು : ನೀನು ದುಡ್ಡು ಇಸಿಕೊಳ್ಳೊದು ಬುಕ್ ಮಾಡೊದು ಪೋಟೋ ಹೊಡೆದು ಕೊಟ್ಟಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೇರ್‌ ಕಟ್‌ ವೇಳೆ ಸಲೂನ್ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂಕೋರ್ಟ್ ಆದೇಶ
Ballari Illegal Urea Scam: ಬಳ್ಳಾರಿಯಲ್ಲಿ ಅಕ್ರಮವಾಗಿ ಪತ್ತೆಯಾದ ಯೂರಿಯ ಗೊಬ್ಬರ ಜಾಲಕ್ಕೆ ಕೇರಳದ ನಂಟು?