ಕಾಂಗ್ರೆಸ್‌ ನಿಂದ  ರಿವರ್ಸ್ ಆಪರೇಶನ್..ಗುಟ್ಟು ಬಿಚ್ಚಿಟ್ಟ ಪ್ರಭಾವಿ ಸಚಿವ

Published : Jul 06, 2019, 05:25 PM IST
ಕಾಂಗ್ರೆಸ್‌ ನಿಂದ  ರಿವರ್ಸ್ ಆಪರೇಶನ್..ಗುಟ್ಟು ಬಿಚ್ಚಿಟ್ಟ ಪ್ರಭಾವಿ ಸಚಿವ

ಸಾರಾಂಶ

ಸಮೂಹ ಸನ್ನಿ ರೀತಿ ಶಾಸಕರು ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದರೆ ನಾವು ರಿವರ್ಸ್ ಆಪರೇಶನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಸಚಿವರೊಬ್ಬರು ಹೇಳಿದ್ದಾರೆ.

ಬೆಳಗಾವಿ(ಜು. 06) ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದು ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ. ಅಂತಿಮವಾಗಿ ಸ್ಪೀಕರ್ ತೀರ್ಮಾನ ಕಾಯ್ದು ನೋಡಬೇಕು,. ರಾಜೀನಾಮೆ ಕೊಟ್ಟವರು ಅದನ್ನು ಹಿಂಪಡೆಯಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರಾಜೀನಾಮೆ ಪರ್ವದ ನಡುವೆ ಟ್ರಬಲ್ ಶೂಟರ್‌ ಡಿಕೆಶಿಗೆ ಮತ್ತೊಂದು ಟ್ರಬಲ್

ಸರಕಾರದ ವಿಸರ್ಜನೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಬೇಕು. ಒಂದು ವೇಳೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಿದ್ದೆ ಆದರೆ ಎರಡು ಪಕ್ಷದಿಂದ ರಿವರ್ಸ್ ಆಪರೇಶನ್ ಮಾಡುತ್ತೇವೆ. ರಿವರ್ಸ್ ಆಪರೇಶನ್ ಗೆ ಬೆಂಗಳೂರಿನಲ್ಲಿ ತಂಡ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ರಾಜೀನಾಮೆ ಸಮೂಹ ಸನ್ನಿ ಸಂಪೂರ್ಣ ಡಿಟೇಲ್ಸ್

ನಾನು ಬೆಳಗಾವಿಯಲ್ಲಿ ಆಪರೇಶನ್ ಮಾಡಲ್.  ಅದಕ್ಕೆ ಬೆಂಗಳೂರಿನಲ್ಲಿ ಒಂದು ಟೀಮ್ ಇದೆ. ಏನೇ ಆದರೂ ಜು. 12 ನೇಯ ತಾರೀಖಿಗೆ ವಿಶ್ವಾಸ ಮತಯಾಚನೆ ಮಾಡಬಹುದು. ಕಾಂಗ್ರೆಸ್ ನವರು ಸುಮ್ಮನೆ ಕುಳಿತುಕೊಂಡಿಲ್ಲ ಎಂದು ಹೇಳಿದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!