ಆ.15ರಿಂದ ಪ್ಲ್ಯಾಸ್ಟಿಕ್ ಬಾಟಲ್ ಕೊಂಡ್ರೂ ಫೈನ್!

By Web DeskFirst Published Jul 6, 2019, 4:45 PM IST
Highlights

ಆ.15ರಿಂದ ಪ್ಲ್ಯಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿಕೆ| ಪ್ಲ್ಯಾಸ್ಟಿಕ್ ಬಾಟಲ್ ಕೊಂಡರೂ ಬೀಳುತ್ತೆ ದಂಡ| ಎಲ್ಲ ತರಹದ ಪ್ಲ್ಯಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿದ ಜಿಲ್ಲಾಡಳಿತ| ಊಟಿಯಲ್ಲಿ ಇನ್ಮುಂದೆ ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ| ಮದ್ರಾಸ್ ಹೈಕೋರ್ಟ್ ಸ್ಪಷ್ಟ ಆದೇಶದ ಹಿನ್ನೆಲೆ|

ಊಟಿ(ಜು.06): ಮದ್ರಾಸ್ ಹೈಕೋರ್ಟ್ ಪ್ಲ್ಯಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ ಹೇರಲಾಗಿದೆ.

ಹೈಕೋರ್ಟ್ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ನಿಲಗೀರಿ ಜಿಲ್ಲಾಡಳಿತ ಊಟಿಯಲ್ಲಿ ಪ್ಲ್ಯಾಸ್ಟಿಕ್ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಪ್ಲ್ಯಾಸ್ಟಿಕ್ ವಸ್ತುಗಳು, ಪ್ಲ್ಯಾಸ್ಟಿಕ್ ಬಾಟಲ್’ಗಳು, ಪ್ಲ್ಯಾಸ್ಟಿಕ್ ರ್ಯಾಪರ್ ಬಳಸಿ ತಿಂಡಿ-ತಿನಿಸುಗಳನ್ನು ಪ್ಯಾಕ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಹಿಂದೆ ಕೊಡೈಕೆನಾಲ್’ನಲ್ಲೂ ಪ್ಲ್ಯಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!