ಕೇಂದ್ರ ಸರ್ಕಾರದಿಂದ ಮತ್ತೊಬ್ಬ ಪ್ರಭಾವಿ ಸಚಿವನಿಗೆ ಶಾಕ್​..!

By Suvarna Web DeskFirst Published Jan 15, 2018, 6:42 PM IST
Highlights
  • ಕಳೆದ ವರ್ಷ ರಾಜ್ಯದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಲಿಂದ ದಾಳಿ
  • ರೋಷನ್ ಬೇಗ್ ಕುಟುಂಬ ಒಡೆತನದ ಕಂಪನಿಯಿಂದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪ

ಬೆಂಗಳೂರು: ಕಳೆದ ವರ್ಷ ರಾಜ್ಯದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ ಇನ್ನೋರ್ವ ಪ್ರಮುಖ ಸಚಿವನಿಗೆ ಜಾರಿ ನಿರ್ದೇಶನಾಲಯವು (ಇಡಿ) ನೋಟಿಸ್ ನೀಡಿದೆ.

ರೋಷನ್ ಬೇಗ್ ಕುಟುಂಬ ಒಡೆತನದ ಕಂಪನಿಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿ ಯುಎಇಯಿಂದ ಅನುಮಾನಸ್ಪದವಾಗಿ ಹಣ ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಡಿಯು ನೋಟಿಸ್ ಜಾರಿಗೊಳಿಸಿದೆ,

ರೋಷನ್ ಬೇಗ್ ಮಗಳು ಸಬೀಹಾ ಫಾತೀಮಾ ಹಾಗೂ ಮಗ ರುಮಾನ್​ ಬೇಗ್​ ಒಡೆತನದ ರುಮಾನ್ ಎಂಟರ್​ಪ್ರೈಸಸ್ ಎಂಬ ಸಾಫ್ಟ್​ವೇರ್ ಕಂಪನಿಯು 2007ರಲ್ಲಿ ಆರಂಭವಾಗಿದೆ.

ದುಬೈಯಿಂದ ಬಂದಿರು ಹಣಕ್ಕೆ ಸಮರ್ಪಕ ಲೆಕ್ಕ ನೀಡದ ಹಿನ್ನಲೆಯಲ್ಲಿ ಈ ನೋಟಿಸ್ ಜಾರಿಯಾಗಿದೆ ಎನ್ನಲಾಗಿದೆ.

ಆದರೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲವೆಂದು ರೋಶನ್ ಬೇಗ್ ಸುವರ್ಣ ನ್ಯೂಸ್’ಗೆ ಪ್ರತಿಕ್ರಿಸಿದ್ದಾರೆ.

click me!