
ಬೆಂಗಳೂರು, [ಅ.21]: ದೇಶಾದ್ಯಂತ ಸಂಚಲನ ಮೂಡಿಸಿದ ಮೀಟೂ ಅಭಿಯಾನದಲ್ಲಿ ಪ್ರಮುಖ ವ್ಯಕ್ತಿ ಹಾಗೂ ನಟರ ಮುಖವಾಡ ಕಳಚುತ್ತಿದೆ. ಅದರಲ್ಲೂ ನಟಿ ಶೃತಿ ಹರಿಹರನ್ ಸಿಡಿಸಿದ ಮೀಟೂ ಬಾಂಬ್ ಇಡೀ ಕನ್ನಡ ಚಿತ್ರರಂಗ ಬೆಚ್ಚಿಬಿದ್ದಿದೆ.
ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾನಿಂದ ಮೀಟೂ ಅನುಭವ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದು, ಇದೀಗ ಶೃತಿ ಹರಿಹರನ್ ಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಈ ಕುರಿತು ಶೃತಿ ಹರಿಹರನ್ ಹೇಳಿದ್ದು ಹೀಗೆ.
#MeToo : ಸ್ಯಾಂಡಲ್ ವುಡ್ ಸ್ಟಾರ್ ನಟನ ಕರಾಳ ಮುಖ ಬಿಚ್ಚಿಟ್ಟ ಶ್ರುತಿ ಹರಿಹರನ್
ಇಂದು [ಭಾನುವಾರ] ಸುದ್ದಿಗಾರೊಂದಿಗೆ ಮಾತನಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರದಲ್ಲಿ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಅರ್ಜುನಾ ಸರ್ಜಾ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸರ್ಜಾ ಅಭಿಮಾನಿಗಳು ಎಂದು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.
ನನಗೆ ಯಾವುದೇ ರೀತಿಯ ಪಬ್ಲಿಸಿಟಿ ಅವಶ್ಯಕತೆ ಇಲ್ಲ. ಶೂಟಿಂಗ್ ಪ್ಯಾಕ್ ಆಪ್ ಆದ್ಮೇಲೆ ಡಿನ್ನರ್ ಗೆ ಆಹ್ವಾನ ನೀಡಿದ್ದರು. ನನ್ನ ಆರೋಪದ ಬಗ್ಗೆ ಅರ್ಜುನ್ ಸರ್ಜಾ ಜತೆ ಮಾತಿಗೆ ಸಿದ್ಧ ಎಂದು ಶೃತಿ ಹರಿಹರನ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.