
ಬೆಂಗಳೂರು(ಅ.8): ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ಮಾಡಿ 11 ಜನರನ್ನು ಬಂಧಿಸಿ ಐವರು ಯುವತಿಯರನ್ನು ರಕ್ಷಿಸಿದ ಘಟನೆ ಬಾಣಸವಾಡಿಯ ಮೋರ್ ಮಾಲ್ ಬಳಿಯ ಮನೆಯೊಂದರಲ್ಲಿ ನಡೆದಿದೆ. ಬಂಧಿತರದಲಿ ತಮಿಳುನಾಡಿನ ಸಚಿವರೊಬ್ಬರ ಪಿಎ ಸಿಕ್ಕಿಬಿದ್ದಿದ್ದಾರೆ. ಈ ಆಪ್ತ ಕಾರ್ಯದರ್ಶಿ ತಮಿಳುನಾಡಿನ ಪಶುಸಂಗೋಪನಾ ಸಚಿವ ಬಾಲಕೃಷ್ಣ'ರೆಡ್ಡಿ ಎನ್ನಲಾಗಿದ್ದು, ಇವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಆಪ್ತರು ಎನ್ನಲಾಗಿದೆ. ಕರ್ನಾಟಕ ಗಡಿಯಲ್ಲಿರುವ ಹೊಸೂರು ಕ್ಷೇತ್ರದಿಂದ ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.