
ಮುಂಬೈ (ಅ.08): ಸದಾ ಒಂದಿಲ್ಲೊಂದು ವಿವಾದ ಸುಳಿಯಲ್ಲಿ ಸಿಲುಕುವ ಸಚಿವೆ ಪಂಕಜ್ ಮುಂಡೆಯವರ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು ಹುಟ್ಟುಹಾಕಿದೆ.
ಪಂಕಜ್ ಮುಂಡೆಯವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಸಿದ್ದ ದೇವಾಲಯದ ಅರ್ಚಕರಿಗೆ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ ಆಡಿಯೋದ ಸತ್ಯಾಸತ್ಯತೆ ಬಗ್ಗೆ ಅಧಿಕೃತವಾಗಿಲ್ಲ.
ಈ ವಿವಾದದ ಬಗ್ಗೆ ಪಂಕಜ್ ಮುಂಡೆಯವರಾಗಲಿ, ಅವರ ಪಕ್ಷ ಬಿಜೆಪಿಯಾಗಲಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.
ಬಾಗ್ವಾಂಗದ್ ನಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ದೇವಸ್ಥಾನದ ಪ್ರಧಾನ ಅರ್ಚಕ ನಾಮ್ ದೇವ್ ಶಾಸ್ತ್ರಿ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.
10 ದಿನಗಳ ಹಿಂದೆ ಮುಂಡೆ ಬೆಂಬಲಿಗರು ಹಾಗೂ ಅರ್ಚಕರ ನಡುವೆ ಜಗಳ ಉಂಟಾಗಿತ್ತು. ಅದರ ಆಡಿಯೋ ಟೇಪ್ ನಲ್ಲಿ ಪಂಕಜ್ ಮುಂಡೆ, ಅರ್ಚಕರ ಬೆಂಬಲಿಗರಿಗೆ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದು ಆ ಧ್ವನಿ ಮುಂಡೆಯವರದ್ದು ಎನ್ನಲಾಗುತ್ತಿದೆ.
ಪರಿಶೀಲನೆ ನಂತರ ಸತ್ಯಾಸತ್ಯತೆ ಗೊತ್ತಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.