ಮಹಿಳಾ ಕಾಂಗ್ರೆಸ್'ನಲ್ಲೀಗ ನಾಯಕರ ಪುತ್ರಿಯರ ದರ್ಬಾರ್

By Web DeskFirst Published Oct 8, 2016, 1:43 PM IST
Highlights

ವಿಧಾನಪರಿಷತ್ಮಾಜಿಸದಸ್ಯಪ್ರಕಾಶ್ರಾಥೋಡ್ಸಹೋದರಿಶೋಭಾರಾಥೋಡ್ (ಉಪಾಧ್ಯಕ್ಷೆ) ಸ್ಥಾನಪಡೆದಿದ್ದಾರೆ. ಅಷ್ಟೇಅಲ್ಲದೆ, ಕೆಪಿಸಿಸಿಅಧ್ಯಕ್ಷಡಾ.ಜಿ. ಪರಮೇಶ್ವರ್ಸಿದ್ದಾರ್ಥವಿದ್ಯಾಸಂಸ್ಥೆಯಉಪನ್ಯಾಸಕಿಯರಿಗೂಉಪಾಧ್ಯಕ್ಷಸ್ಥಾನಕಲ್ಪಿಸಲಾಗಿದೆ.

ಬೆಂಗಳೂರು(ಅ.8): ದಶಕದ ನಂತರ ಪುನಾರಚನೆಯಾದ ರಾಜ್ಯ ಮಹಿಳಾ ಕಾಂಗ್ರೆಸ್‌ನಲ್ಲಿ ನಾಯಕರ ಪುತ್ರಿಯರಿಗೇ ಆದ್ಯತೆ ನೀಡಲಾಗಿದೆ.

ಮಾಜಿ ಸಚಿವೆ ರಾಣಿ ಸತೀಶ್ ಅಧ್ಯಕ್ಷೆಯಾಗಿದ್ದ ನಂತರ ಸಮಿತಿ ಪುನಾರಚನೆಯೇ ಆಗಿರಲಿಲ್ಲ. ಹೀಗಾಗಿ ಪಕ್ಷದ ಅಧ್ಯಕ್ಷ ಮತ್ತ್ತು ಕಾರ್ಯಾಧ್ಯಕ್ಷರ ಸೂಚನೆಯಂತೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಿತಿಯನ್ನು ಪುನಾರಚಿಸಿದ್ದು, ನೂತನ ಪದಾಕಾರಿಗಳ ಪಟ್ಟಿ ಪ್ರಕಟಿಸಿದ್ದಾರೆ.

ಹೊಸ ಪದಾಕಾರಿಗಳ ಪಟ್ಟಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ (ಕಾರ್ಯದರ್ಶಿ), ಮಾಜಿ ಸಚಿವ ಮೋಟಮ್ಮ ಪುತ್ರಿ ನಯನಾ ಜವಾಹರ್ (ಪ್ರಧಾನ ಕಾರ್ಯದರ್ಶಿ), ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಮುನಿಯಪ್ಪ (ಕೋಲಾರ ಜಿಲ್ಲಾ ಅಧ್ಯಕ್ಷೆ), ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಥೋಡ್ ಸಹೋದರಿ ಶೋಭಾ ರಾಥೋಡ್ (ಉಪಾಧ್ಯಕ್ಷೆ) ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ರ ಸಿದ್ದಾರ್ಥ ವಿದ್ಯಾಸಂಸ್ಥೆಯ ಉಪನ್ಯಾಸಕಿಯರಿಗೂ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

ಜಿಲ್ಲಾಧ್ಯಕ್ಷರು

ಬೆಂಗಳೂರು ಗ್ರಾಮಾಂತರ- ಎಂ.ಕಮಲಾಕ್ಷಿ ರಾಜಣ್ಣ, ಬೆಳಗಾವಿ ನಗರ-ವಿಜಯಾ ಎಸ್. ಹಿರೇಮಠ, ಬಳ್ಳಾರಿ ನಗರ- ಟಿ.ಪದ್ಮ, ಚಿಕ್ಕಮಗಳೂರು- ಕೆ.ಎಚ್. ವನಮಾಲಾ ದೇವರಾಜು, ಚಿತ್ರದುರ್ಗ- ಪಿ.ಕೆ. ಮೀನಾಕ್ಷಿ, ದಕ್ಷಿಣ ಕನ್ನಡ- ಶಾಲೆಟ್‌ಪಿಂಟೋ, ಧಾರವಾಡ ಗ್ರಾಮೀಣ- ಶೈಲಾ ವೆಂಕಟರೆಡ್ಡಿ ಕಮ್ಮರೆಡ್ಡಿ, ಹುಬ್ಬಳ್ಳಿ-ಧಾರವಾಡ ನಗರ- ಜಿ.ದೇವಕಿ ಯೋಗಣ್ಣ, ಕೋಲಾರ- ರೂಪಾ ಮುನಿಯಪ್ಪ, ಮಂಡ್ಯ-ಅಂಜನಾ ಶ್ರೀಕಾಂತ್, ರಾಯಚೂರು-ನಿರ್ಮಲಾ ಬೆನ್ನಿ ಮತ್ತು ರಾಮನಗರ- ಬಿ.ಸಿ. ಪಾರ್ವತಮ್ಮ ಅವರನ್ನು ನೇಮಕ ಮಾಡಲಾಗಿದೆ.

click me!