ನಾರಿಮನ್ ಭೇಟಿ ಬಳಿಕ  ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಿಷ್ಟು..

Published : Sep 10, 2016, 07:47 AM ISTUpdated : Apr 11, 2018, 12:52 PM IST
ನಾರಿಮನ್ ಭೇಟಿ ಬಳಿಕ  ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಿಷ್ಟು..

ಸಾರಾಂಶ

ಕಾವೇರಿ ನೀರು ವಿವಾದ ಕುರಿತಂತೆ ನಾರಿಮನ್ ಜೊತೆ ಎಂ.ಬಿ. ಪಾಟೀಲ್ ಚರ್ಚೆ

ನವದೆಹಲಿ(ಸೆ.10): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್​ ಕರ್ನಾಟಕ ಪರ ವಾದಿಸುತ್ತಿರುವ ವಕೀಲ ಫಾಲಿ ನಾರಿಮನ್​ ಅವ​​​​​​​ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ನಾರಿಮನ್ ನಿವಾಸದಲ್ಲಿ ರಾಜ್ಯದ ಅಧಿಕಾರಿಗಳ ಜೊತೆ ಎಂ.ಬಿ. ಪಾಟೀಲ್​ ಚರ್ಚಿಸಿದರು. ಕಾವೇರಿ ವಿಚಾರದಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ  ಎಂ.ಬಿ. ಪಾಟೀಲ್, ನೀರು ಬಿಟ್ಟಿರುವುದರಿಂದ ರಾಜ್ಯದ ಬೆಳೆಗಳಿಗೆ ತೊಂದರೆಯಾಗಿದೆ, ರಾಜ್ಯದ ವಾಸ್ತವ ಸ್ಥಿತಿ ಕುರಿತು ನಾರಿಮನ್​ಗೆ ವಿವರಿಸಲಾಗಿದೆ. ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ನಮ್ಮ ರೈತರು ಬೆಳೆಗಳಿಗಿರಲಿ, ಕುಡಿಯುವುದಕ್ಕೂ ನೀರಿಲ್ಲ ೆಂಬ ಬಗ್ಗೆ ನಾರಿಮನ್`ಗೆ ಮನವರಿಕೆ ಮಾಡಕೊಟ್ಟಿದ್ದೇವೆ. ಶೀಘ್ರವೇ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ನಾರಿಮನ್​​ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!