
ಬಿಜೀಂಗ್(ಸೆ.10): ಚೀನಾದ ರಾಜಧಾನಿ ಬಿಜೀಂಗ್'ನಲ್ಲಿ ಮನೆಯೊಂದರಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ದೆವ್ವದ ಆಟಗಳು ದಾಖಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಡುರಾತ್ರಿಯಲ್ಲಿ ನಿಲ್ಲಿಸಿದ್ದ ಸೈಕಲ್ ತುಳಿಯುವ ದೆವ್ವ, ಮೇಲಿಟ್ಟಿದ್ದ ಪ್ಲ್ಯಾಸಿಕ್ ಬಕೆಟ್ ಅನ್ನು ಉರುಳಿಸಿ ಮನೆಯವರನ್ನು ಎದ್ದೇಳಿಸಿದೆ.
ಸುಮ್ಮನೆ ನಿಂತಿದ್ದ ಸೈಕಲ್'ನ ಹಿಂಬದಿಯ ಚಕ್ರ ಇದಕ್ಕಿದ್ದಂತೆ ತಿರುಗಲು ಶುರುವಾಗುದಲ್ಲದೇ ಯಾವ ಸಹಾಯವೂ ಇಲ್ಲದೇ ಪಡೆಲ್ ಆಗುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದೇ ಚಕ್ರ ಉಲ್ಟಾ ತಿರುಗಲು ಶುರುವಾಗುತ್ತದೆ.
ನಂತರ ಇದಕ್ಕೆ ಇದ್ದ ಹಾಗೇ ಮಂಚದ ಮೇಲಿಟ್ಟಿದ್ದ ಪ್ಲ್ಯಾಸ್ಟಿಕ್ ಬಕೆಟ್ವೊಂದು ನೆಲಕ್ಕೆ ಉರುಳುತ್ತದೆ. ಈ ಶಬ್ದ ಕೇಳಿ ಮನೆಯವರು ಎದ್ದು ಹೊರ ಬರುತ್ತಿದ್ದಂತೆ ದೆವ್ವದ ಆಟಗಳು ನಿಂತು ಹೋಗುತ್ತದೆ. ನೀವು ನಂಬುದಿಲ್ಲ ಎನ್ನುವುದಾದರೆ ಈ ವಿಡಿಯೋ ನೋಡಿ.
https://www.youtube.com/watch?v=g5qJHN29JdI
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.