ಮದುವೆ, ಫಸ್ಟ್'ನೈಟ್ & ಕಿಡ್ನಾಪ್: ಸಚಿವ ಜಯಚಂದ್ರ ಬಂಟನ ಕಿಡ್ನಾಪ್ ಕಥೆಗೆ ಬಿಗ್ ಟ್ವಿಸ್ಟ್!

Published : Oct 06, 2017, 03:16 PM ISTUpdated : Apr 11, 2018, 01:08 PM IST
ಮದುವೆ, ಫಸ್ಟ್'ನೈಟ್ & ಕಿಡ್ನಾಪ್: ಸಚಿವ ಜಯಚಂದ್ರ ಬಂಟನ ಕಿಡ್ನಾಪ್ ಕಥೆಗೆ ಬಿಗ್ ಟ್ವಿಸ್ಟ್!

ಸಾರಾಂಶ

ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ  ಸಚಿವ ಟಿಬಿ ಜಯಚಂದ್ರರ ಆಪ್ತ ಚನ್ನನಕುಂಟೆ ತಿಪ್ಪೇಶ್, ನವ ವಧುವನ್ನೇ ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶಿರಾ ತಾಲೂಕಿನ ಕಗ್ಗಲವಾಡಾದ ವೀಣಾ ಎಂಬ ಯುವತಿಯನ್ನು, ಶಿರಾ ಪಟ್ಟಣದ ಮಹೇಶ್ ಎಂಬ ಯುವಕನಿಗೆ  ಕೊಟ್ಟು ಮೇ 21ರಂದು ಮದುವೆ ಮಾಡಲಾಗಿತ್ತು. ಮದುವೆಯಾಗಿ 9ನೇ ದಿನಕ್ಕೆ ಫಸ್ಟ್ ನೈಟ್ ನಡೆಯಬೇಕಿತ್ತು. ಆದರೆ, ಫಸ್ಟ್​​ ನೈಟ್​ ದಿನವೇ ಜಯಚಂದ್ರರ ಬಂಟ ತಿಪ್ಪೇಶ್ ವೀಣಾಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ವೀಣಾಳ ಕುಟುಂಬಸ್ಥರು ಆರೋಪಿಸಿದ್ದರು.

ತುಮಕೂರು(ಅ.06): ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ  ಸಚಿವ ಟಿಬಿ ಜಯಚಂದ್ರರ ಆಪ್ತ ಚನ್ನನಕುಂಟೆ ತಿಪ್ಪೇಶ್, ನವ ವಧುವನ್ನೇ ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶಿರಾ ತಾಲೂಕಿನ ಕಗ್ಗಲವಾಡಾದ ವೀಣಾ ಎಂಬ ಯುವತಿಯನ್ನು, ಶಿರಾ ಪಟ್ಟಣದ ಮಹೇಶ್ ಎಂಬ ಯುವಕನಿಗೆ  ಕೊಟ್ಟು ಮೇ 21ರಂದು ಮದುವೆ ಮಾಡಲಾಗಿತ್ತು. ಮದುವೆಯಾಗಿ 9ನೇ ದಿನಕ್ಕೆ ಫಸ್ಟ್ ನೈಟ್ ನಡೆಯಬೇಕಿತ್ತು. ಆದರೆ, ಫಸ್ಟ್​​ ನೈಟ್​ ದಿನವೇ ಜಯಚಂದ್ರರ ಬಂಟ ತಿಪ್ಪೇಶ್ ವೀಣಾಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ವೀಣಾಳ ಕುಟುಂಬಸ್ಥರು ಆರೋಪಿಸಿದ್ದರು.

ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾಣೆಯಾಗಿರುವ ವೀಣಾ ಖುದ್ದು ವಿಡಿಯೋ ಮಾಡಿದ್ದಾಳೆ. ಅತ್ತೆ ಸಿದ್ದಗಂಗಮ್ಮ ಚಿತ್ರಹಿಂಸೆ ಮಾಡಿ ತನ್ನ ಮಗ ಮಹೇಶನೊಂದಿಗೆ ಮದುವೆ ಮಾಡಿದ್ದಾಳೆ ಎಂದು ವೀಣಾ ಆರೋಪಿಸಿದ್ದಾಳೆ. ಅಲ್ಲದೇ ತಿಪ್ಪೇಶ್ ಹಾಗೂ ನಾನು ಪ್ರೀತಿಸಿ ಮೊದಲೇ  ಮದುವೆಯಾಗಿದ್ದೇವೆ. ಆದರೂ ನನ್ನನ್ನು ಬಲವಂತ ಮಾಡಿ ಮಹೇಶ್​​ ಜೊತೆ ಮದುವೆ ಮಾಡಿಸಿದ್ದಾರೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ವೀಣಾ ಸ್ಪಷ್ಟಪಡಿಸಿದ್ದಾಳೆ. ಅತ್ತೆ ಸಿದ್ದಗಂಗಮ್ಮ ತನ್ನ ಮಗ ಮಹೇಶ್ ಜೊತೆ ಸೇರಿ ನನಗೆ ಮಚ್ಚಿನಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಅಂತ ಆರೋಪಿಸಿದ್ದಾಳೆ.

ಅಲ್ಲದೇ ಸಿದ್ದಗಂಗಮ್ಮ ನನ್ನನ್ನು ವೇಶ್ಯಾವಾಟಿಕೆ ದಂಧೆಗೆ ಇಳಿಸಲು ಮುಂದಾಗಿದ್ದಳು, ಇದರಿಂದ ಭಯಭೀತಗೊಂಡು ನಾನು ಅವರಿಂದ ತಪ್ಪಿಸಿಕೊಂಡು ಮನೆಯಿಂದ ಹೊರಬಂದೆ ಎಂದು ಹೇಳಿದ್ದಾಳೆ. ಪತಿ ತಿಪ್ಪೇಶ್ ಹಾಗೂ ನನಗೆ ಜೀವ ಭಯ ಇದ್ದು, ಪೊಲೀಸರು ತಮಗೆ ರಕ್ಷಣೆ ನೀಡಬೇಕು ಎಂದು ವಿಡಿಯೋ ಮಾಡಿದ್ದಾಳೆ..

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಾಂಧೀಜಿ ಹೆಸರು ರದ್ದತಿ ಅವರ 2ನೇ ಹತ್ಯೆಗೆ ಸಮ : ಚಿದಂಬರಂ ಕಿಡಿ
ಸಂಸತ್ತಲ್ಲಿ ಇ-ಸಿಗರೇಟು ಸೇದಿದ್ದು ಕೀರ್ತಿ ಆಜಾದ್ : ಬಿಜೆಪಿ