‘ಇಲ್ಲಿ ಮಳೆಗಾಗಿ ಮೊರೆ ಹೋದ್ರೆ ಮಳೆಯಾಗೋದು ಖಚಿತ’

By Web Desk  |  First Published Jun 7, 2019, 9:40 AM IST

ಈ ಕ್ಷೇತ್ರದಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಿದಲ್ಲಿ ರಾಜ್ಯಕ್ಕೆ ಮಳೆಯಾಗುವುದು ಖಚಿತ. ಪುಣ್ಯ ಕ್ಷೇತ್ರವಾದ ಇಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ಮಳೆ ಸುರಿಯಲು ಕಾರಣವಾಗುತ್ತದೆ. 


ಶೃಂಗೇರಿ :  ಕಿಗ್ಗಾ ವಿಶೇಷವಾದ ಪುಣ್ಯಕ್ಷೇತ್ರ. ಇದು ದೇವತೆಗಳ, ಋುಷಿಮುನಿಗಳ ತಪೋಭೂಮಿ. ಇಲ್ಲಿ ಮಳೆಗಾಗಿ ಮೊರೆ ಹೋದರೆ ರಾಜ್ಯಕ್ಕೆ ಮಳೆಯಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ತಾಲೂಕಿನ ಕಿಗ್ಗಾ ಶ್ರೀ ಋುಷ್ಯಶೃಂಗೇಶ್ವರ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯಜಪ, ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ ಮಳೆಯಿಲ್ಲದೇ ಬರ ಉಂಟಾಗಿ ನೀರಿಗಾಗಿ ಜನ ತತ್ತರಿಸಿದ್ದರು. ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆ ವತಿಯಿಂದ ಎರಡು ಬಾರಿ ನಾನು ಮಳೆಗಾಗಿ ಪೂಜೆ, ಪರ್ಜನ್ಯ ಜಪ ಮಾಡಿಸಿದ್ದೆ. 

Tap to resize

Latest Videos

ಆ ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯೂ ಆಗಿತ್ತು. ಈ ಬಾರಿಯೂ ಮಳೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ಶ್ರಮವಿದ್ದಲ್ಲಿ ಫಲವಿದೆ. ಭಕ್ತಿಯಿದ್ದಲ್ಲಿ ಭಗವಂತನಿದ್ದಾನೆ. ಮನಸಿದ್ದಲ್ಲಿ ಮಾರ್ಗವಿದೆ. ಭವಂತನಲ್ಲಿ ಭಕ್ತಿ, ನಂಬಿಕೆಯಿಟ್ಟರೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಸಚಿವ ಹೇಳಿದರು.

click me!