
ಬೆಂಗಳೂರು(ಡಿ.01): ನೋಟ್ ಬ್ಯಾನ್ ಬಳಿಕ ಕಾಳಧನಿಕರ ಬೇಟೆಗೆ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ ಎಚ್.ಸಿ.ಮಹದೇವಪ್ಪ ಆಪ್ತರಾದ ಜಯಚಂದ್ರ, ಚಿಕ್ಕರಾಯಪ್ಪ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಸುಮಾರು ಯಲ್ಲಿ 4.5 ಕೋಟಿ ರೂಪಾಯಿಯಷ್ಟು ಹೊಸ 2000 ರೂ. ನೋಟುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಚಿಕ್ಕರಾಯಪ್ಪ ಕಾವೇರಿ ನಿಗಮದ ಎಂಡಿಯಾಗಿದ್ದು, ಸಿಎಂ ಆಪ್ತರೂ ಹೌದು ಎನ್ನಲಾಗಿದೆ. ಜಯಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿರುವ ಜಯಚಂದ್ರ ನಿವಾಸದ ಮೇಲೆ ದಾಳಿ ನಡೆದಿದೆ. ಜಯಚಂದ್ರ ಪುತ್ರ ತ್ರಿಜೇಶ್ ಹೆಸರಲ್ಲಿ ಐಷಾರಾಮಿ ಪೋರ್ಶ್, ಲ್ಯಾಂಬರ್ಗಿನಿ ಕಾರುಗಳನ್ನೂ ಖರೀದಿಸಿರುವ ಬೆಳಕಿಗೆ ಬಂದಿದೆ.
ವಶಪಡಿಸಿಕೊಂಡ ಸಂಪತ್ತು
- 6 ಕೋಟಿಗೂ ಹೆಚ್ಚು ನಗದು ವಶ, 7 ಕೆ.ಜಿ ಚಿನ್ನಾಭರಣ ವಶ
- 2 ಸಾವಿರ ಮುಖ ಬೆಲೆಯ 4.7 ಕೋಟಿ ರೂ. ಪತ್ತೆ
- ಸ್ಥಿರ ಮತ್ತು ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳೂ ಪತ್ತೆ
- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಮಾಧ್ಯಮ ಪ್ರಕಟಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.