
ನವದೆಹಲಿ[ಮಾ.04]: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಗ್ಗೆ ನಿವೃತ್ತ ವಾಯುಪಡೆ ಅಧಿಕಾರಿಗಳು ಗುಣಗಾನ ಮಾಡುತ್ತಿದ್ದಾರೆ. ಎಫ್-16ನಂತಹ ವಿಮಾನವನ್ನು ಮಿಗ್‌ನಂತಹ ಹಳೆಯ ವಿಮಾನ ಪತನಗೊಳಿಸಿದ ನಿದರ್ಶನ ವಿಶ್ವದಲ್ಲಿ ಪ್ರಾಯಶಃ ಇದೇ ಮೊದಲು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ ವಾಯುಪಡೆಯಲ್ಲಿರುವ ಮಿಗ್-21 ವಿಮಾನಗಳು 1960ರ ದಶಕದ ಮಾಡೆಲ್‌ಗಳು. ಅವನ್ನು ಭಾರತ ಮೇಲ್ದರ್ಜೆಗೇರಿಸಿ ಇನ್ನೂ ಬಳಸುತ್ತಿದೆ. ಆದರೆ ಪಾಕಿಸ್ತಾನದ ಬತ್ತಳಿಕೆಯಲ್ಲಿರುವ ಎಫ್-16 ಅತ್ಯಾಧುನಿಕ ಸೌಲಭ್ಯ ಹೊಂದಿದ ವಿಮಾನಗಳು. ಅಂತಹ ವಿಮಾನವನ್ನೇ ಅಭಿನಂದನ್ ಅವರು ಹೊಡೆದುರುಳಿಸಿದ್ದಾರೆ. ಆರ್-73 ಎಂಬ ಕ್ಷಿಪಣಿ ಬಳಸಿ ಎಫ್-16 ನೆಲಕ್ಕೆ ಕೆಡವಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ.
ಭಾರತದ ಮೇಲೆ ದಾಳಿಗೆ ಎಫ್-16 ಅನ್ನು ಪಾಕಿಸ್ತಾನ ನಿಯೋಜಿಸಿದ್ದರೂ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ, ಅದು ಎಫ್-16 ಅನ್ನು ಅಮೆರಿಕದಿಂದ ರಿಯಾಯಿತಿ ದರದಲ್ಲಿ ಖರೀದಿಸುವಾಗ ಮಾಡಿಕೊಂಡಿದ್ದ ಒಪ್ಪಂದಕ್ಕೆ ವಿರುದ್ಧವಾಗುತ್ತದೆ. ಉಗ್ರರ ವಿರುದ್ಧ ಮಾತ್ರ ಈ ವಿಮಾನಗಳನ್ನು ಬಳಸಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕ ಒಪ್ಪಂದದಲ್ಲಿ ಸೂಚಿಸಿದೆ ಎನ್ನಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.