
ನವದೆಹಲಿ[ಮಾ.04]: ಭಾರತೀಯ ವಾಯುಪಡೆ ಯ ಯೋಧರು, ಪಾಕಿಸ್ತಾನದ ಬಾಲಾ ಕೋಟ್‌ನ ಜೈಷ್ ಎ ಮಹಮ್ಮದ್ ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈ ದಿದ್ದಕ್ಕೆ ಸಾಕ್ಷ್ಯ ಕೇಳುತ್ತಿದ್ದ ಭಾರತದ ವಿಪಕ್ಷ ಗಳಿಗೆ ಇದೀಗ ಜೈಷ್ ಉಗ್ರರೇ ಸಾಕ್ಷ್ಯ ನೀಡಿದ್ದಾರೆ. ಬಾಲಾಕೋಟ್ ಮೇಲೆ ಭಾರತೀಯರು ದಾಳಿ ನಡೆಸಿದ್ದು ನಿಜ ಎಂದು ಸ್ವತಃ ಜೈಷ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್‌ನ ಸೋದರ ಮೌಲಾನಾ ಅಮ್ಮಾರ್ ಒಪ್ಪಿಕೊಂಡಿದ್ದಾನೆ.
ಇದರೊಂದಿಗೆ, ವಾಯುದಾಳಿ ಚುನಾವಣಾ ತಂತ್ರಗಾರಿಕೆ. ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಈ ದಾಳಿಯ ನಾಟಕವಾಡುತ್ತಿದೆ. ದಾಳಿಯೇ ನಡೆದಿಲ್ಲ ಎಂದು ವಾದಿಸುತ್ತಿದ್ದ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ. ಅಲ್ಲದೆ ಬಾಲಾಕೋಟ್‌ನಲ್ಲಿ ಯಾವುದೇ ಉಗ್ರ ನೆಲೆಗಳಿಲ್ಲ. ಅಲ್ಲಿ ಯಾವುದೇ ದೊಡ್ಡ ದಾಳಿ ನಡೆದಿಲ್ಲ ಎಂದು ವಾದಿಸುತ್ತಿದ್ದ ಇಮ್ರಾನ್‌ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ಕೂಡಾ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೀಡಾಗಿದೆ.
ದಾಳಿ ನಿಜ: ಬಾಲಾಕೋಟ್ ದಾಳಿ ವೇಳೆ 300-350 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತಾದರೂ, ಈ ದಾಳಿಯನ್ನು ಪಾಕಿಸ್ತಾನ ಸರ್ಕಾರ ನಿರಾಕರಿಸುತ್ತಲೇ ಬಂದಿತ್ತು. ಮತ್ತೊಂದೆಡೆ ಭಾರತದಲ್ಲಿ ಹಲವು ವಿಪಕ್ಷಗಳು ಕೂಡಾ ಇದೇ ಧಾಟಿಯಲ್ಲಿ ಪ್ರಶ್ನಿಸುವ ಮೂಲಕ ಭಾರತೀಯ ಯೋಧರನ್ನು ಅವಮಾನಿಸುವ ಕೆಲಸ ಮಾಡಿದ್ದವು.
ಆದರೆ ದಾಳಿ ನಡೆದಿದ್ದು ನಿಜ ಎಂದು ಸ್ವತಃ ಮಸೂದ್ ಅಜರ್‌ನ ಸೋದರ ಮೌಲಾನಾ ಅಮ್ಮಾರ್ ಒಪ್ಪಿಕೊಂಡಿದ್ದಾನೆ. ಪೇಶಾವರದ ಮದ್ರಸ್ಸಾಹ್ ಸನಾನ್ ಬಿನ್ ಸಲ್ಮಾದಲ್ಲಿ ಉಗ್ರರನ್ನುದ್ದೇಶಿಸಿ ಅಮ್ಮಾರ್ ವಿಡಿಯೋ ಹೇಳಿಕೆ ನೀಡಿದ್ದು ಅದರಲ್ಲಿ ಈ ಅಂಶವಿದೆ. ಈ ಆಡಿಯೋದಲ್ಲಿ, ‘ಗಡಿ ರೇಖೆಯನ್ನು ದಾಟಿ ಇಸ್ಲಾಮಿಕ್ ರಾಷ್ಟ್ರವನ್ನು ಪ್ರವೇಶಿಸಿ ಮುಸ್ಲಿಂ ಶಾಲೆಗಳ ಮೇಲೆ ದಾಳಿ ನಡೆಸುವ ಮೂಲಕ ಶತ್ರು ದೇಶ ನಮ್ಮ ವಿರುದ್ಧ ಯುದ್ಧ ಸಾರಿದೆ. ಹಾಗಾಗಿ, ಜಿಹಾದಿಯು ಇನ್ನೂ ತನ್ನ ಕೆಲಸದಲ್ಲಿ ಸಕ್ರಿಯವಾಗಿದೆ ಎಂಬುದನ್ನು ನಿರೂಪಿಸಲು ನೀವೆಲ್ಲರೂ ನಿಮ್ಮ ಕೈಯಲ್ಲಿರುವ ಆಯುಧ ಎತ್ತಿ ಹಿಡಿಯಿರಿ,’ ಎಂದು ಹೇಳಿದ್ದಾನೆ.
ಈ ಆಡಿಯೋವನ್ನು ಮೊದಲಿಗೆ ಫ್ರಾನ್ಸ್‌ನಲ್ಲಿರುವ ಪಾಕಿಸ್ತಾನದ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದು, ಈ ಆಡಿಯೋವನ್ನು ಭಾರತದ ಭದ್ರತಾ ಸಂಸ್ಥೆ ದೃಢೀಕರಿಸಿದೆ. ಅಲ್ಲದೆ, ‘ನಮ್ಮ ಸಂಘಟನೆಗೆ ಸೇರಿದ ಸುರಕ್ಷಿತವಾದ ಯಾವುದೇ ಮನೆಯ ಮೇಲೆ ಭಾರತ ಬಾಂಬ್ ಹಾಕಿಲ್ಲ. ನಮ್ಮ ಕಚೇರಿಗಳ ಮೇಲೆಯೂ ಅವರು ದಾಳಿ ಮಾಡಿ ಲ್ಲ. ಅಥವಾ ನಮ್ಮ ಸಭೆಗಳ ಕೇಂದ್ರದ ಮೇಲೆಯೂ ಅವರು ದಾಳಿ ಮಾಡಿಲ್ಲ. ಆದರೆ, ಅವರು ಜಿಹಾದಿ ಕುರಿತು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದ ಶಾಲೆಗಳ ಮೇಲೆ ದಾಳಿ ಮಾಡಿದ್ದಾರೆ ಎಂಬುದನ್ನು ನೆನಪಿಸಲು ಬಯಸುತ್ತೇನೆ,’ ಎಂದು ಹೇಳಿದ್ದಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.