
ಬೆಂಗಳೂರು (ಫೆ.16): ಯಲಹಂಕದ ವಾಯು ನೆಲೆಯಲ್ಲಿ 11ನೇ ಏರ್ ಇಂಡಿಯಾ ಶೋ ಲೋಹದ ಹಕ್ಕಿಗಳ ಚಮತ್ಕಾರ ಆಗಸದಲ್ಲಿ ಹಕ್ಕಿಗಳನ್ನೂ ನಾಚಿಸುವಂತ್ತಿದೆ.
ದೇಶ ವಿದೇಶಗಳಿಂದ ಬಂದಿರುವ ವಿವಿಧ ಕಂಪನಿಗಳ ಯುದ್ಧೋಪಕರಣಗಳು ಏರ್ ಶೋ ಬರುವ ಜನರ ಗಮನ ಸೆಳೆಯುತ್ತಿದೆ. ಅದರಲ್ಲೂ ರಷ್ಯಾದ ಟುನಗುಸ್ಕಾ ಎಮ್-1 ಯುದ್ಧ ಟ್ಯಾಂಕರ್ ಸಾಕಷ್ಟು ವಿಶಿಷ್ಟತೆಗಳಿಂದ ಕೂಡಿದೆ.
ಈ ಟ್ಯಾಂಕರ್ ನೂತನ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಸ್ವಯಂ ಚಾಲಿತ ಟ್ಯಾಂಕರ್ ಇದಾಗಿದ್ದು, ಸುಮಾರು 32 ಟನ್ ತೂಕ ಹೊಂದಿದೆ. ಈ ಯುದ್ಧ ಟ್ಯಾಂಕರ್, ಪ್ರತಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಓಡುತ್ತೆ.
ಈ ಟ್ಯಾಂಕರ್'ನ 25 ಕಿ.ಮೀ ಸುತ್ತಮುತ್ತ ಯಾವುದೇ ವಿಮಾನ ಅಥವಾ ಶತ್ರುಗಳ ಟ್ಯಾಂಕರ್ ಗಳು ಬಂದರೂ ಆಟೋಮ್ಯಾಟಿಕ್ ಆಗಿ ಸ್ಕ್ಯಾನ್ ಮಾಡಬಲ್ಲ ಅತ್ಯಾಧುನಿಕ ಮಿಶನ್ ಗಳನ್ನು ಅಳವಡಿಸಲಾಗಿದೆ.
ಬೃಹತ್ ಆಕಾರದ ಗನ್, ವಿಶ್ಯಾಲ್'ಗಳನ್ನು ಈ ಟ್ಯಾಂಕರ್'ಗೆ ಅಳವಡಿಸಲಾಗಿದ್ದು ಈ ಬಾರಿಯ ಯುದ್ಧೋಪಕರಣ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಆಧುನಿಕ ವೈರ್'ಲೆಸ್ ಕ್ಯಾಮರಾಗಳು:
ಭಾರತದ ಗಡಿಯಲ್ಲಿ ಎದುರಾಳಿಗಳ ಚಲನ ವಲನ ಕಂಡು ಹಿಡಿಯುವುದು ಸಾಮಾನ್ಯವಲ್ಲ. ಹೀಗಾಗಿ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನೋಲಾಜಿ ಕಂಪನಿಯವರು ಹಗಲು ಮತ್ತು ರಾತ್ರಿ ವೇಳೆ ಶತ್ರುಗಳ ಚಲನ ವಲನ ಕಂಡುಹಿಡಿಯುವ ನ್ಯೂ ಟೆಕ್ನಾಲಜಿಯ ಕ್ಯಾಮೆರಾವನ್ನು ತಯಾರಿಸಿದ್ದಾರೆ.
ಇದರಿಂದ ರಾತ್ರಿಹೊತ್ತು ಶತ್ರುಗಳನ್ನು ಈ ಕ್ಯಾಮರಾಗಳು ಸ್ಪಷ್ಟವಾಗಿ ಗುರುತಿಸುತ್ತೇವೆ. ಇದರ ಇನ್ನೊಂದು ವಿಶೇಷತೆ ಎಂದರೆ ಇವು ವೈರ್'ಲೆಸ್ ಕ್ಯಾಮರಾಗಳು, ಇವುಗಳನ್ನು ಎಲ್ಲಿ ಬೇಕಾದರೂ ಫಿಟ್ ಮಾಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.