ಮೆಸೊಜೊಯಿಕ್ ಯುಗದ ಬೃಹತ್ ಮರದ ಪಳೆಯುಳಿಕೆ ಪತ್ತೆ!

By Web DeskFirst Published May 2, 2019, 2:27 PM IST
Highlights

ಹಿಮಾಚಲ ಪ್ರದೇಶದಲ್ಲಿ ಸಿಕ್ಕ ಬೃಹತ್ ಮರದ ಪಳೆಯುಳಿಕೆ| ಶಿಮ್ಲಾದ ಖರಾಪತ್ತರ್ ಪ್ರದೇಶದಲ್ಲಿ ಪತ್ತೆಯಾದ ಮರದ ಪಳೆಯುಳಿಕೆ| ಮೆಸೊಜೊಯಿಕ್ ಭೂವೈಜ್ಞಾನಿಕ ಯುಗಕ್ಕೆ ಸೇರಿದ ಮರದ ಪಳೆಯುಳಿಕೆ| 

ಶಿಮ್ಲಾ(ಮೇ.02): ಮೆಸೊಜೊಯಿಕ್ ಭೂವೈಜ್ಞಾನಿಕ ಯುಗಕ್ಕೆ ಸೇರಿದ ಬೃಹತ್ ಮರದ ಪಳೆಯುಳಿಕೆಯೊಂದು ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ.

ಶಿಮ್ಲಾ ಜಿಲ್ಲೆಯ ಖರಾಪತ್ತರ್ ಪ್ರದೇಶದಲ್ಲಿ ಈ ಬೃಹತ್ ಮರದ ಪಳೆಯುಳಿಕೆ ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸ್ಟೇಟ್ ಮ್ಯೂಸಿಯಂ ಕ್ಯುರೇಟರ್ ಹರೀಶ್ ಚೌಹ್ಹಾಣ್, ಈ ಪಳೆಯುಳಿಕೆ ಮೆಸೊಜೊಯಿಕ್ ಭೂವೈಜ್ಞಾನಿಕ ಯುಗಕ್ಕೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾರೆ.

Himachal Pradesh: A tree fossil found in Kharapathar, Shimla district. According to Harish Chauhan, Curator State Museum the fossil belongs to the Mesozoic geological era. pic.twitter.com/qJ0vjLuZcB

— ANI (@ANI)


ಮೆಸೊಜೊಯಿಕ್ ಭೂವೈಜ್ಞಾನಿಕ ಯುಗ:
ಸುಮಾರು 252ರಿಂದ 66 ಮಿಲಿಯನ್ ವರ್ಷಗಳ ಹಿಂದಿನ ಕಾಲವನ್ನು ಮೆಸೊಜೊಯಿಕ್ ಭೂವೈಜ್ಞಾನಿಕ ಯುಗ ಎಂದು ಕರೆಯಲಾಗುತ್ತದೆ. ಇದನ್ನು ಸರೀಸೃಪಗಳ ಯುಗ ಎಂತಲೂ ಕರೆಯಲಾಗುತ್ತದೆ.
 

click me!