
ಬೆಳಗಾವಿ(ಮಾ.01): ಕನ್ನಡಿಗರ ಕಿತ್ತಾಟದ ಪರಿಣಾಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎಂಇಎಸ್ ಪಾಲಾಗಿದೆ. ಸಹೋದರರಾದ ಸತೀಶ್ ಜಾರಕಿಹೋಳಿ ಹಾಗೂ ರಮೇಶ್ ಜಾರಕಿ ಹೋಳಿ ಒಣ ಪ್ರತಿಷ್ಠೆಗೆ ಬೆಳಗಾವಿ ಪಾಲಿಕೆ ಅಧಿಕಾರವನ್ನು ಮಹಾರಾಷ್ಟ್ರ ಏಕಿಕರಣ ಸಮಿತಿ ಪಡೆದುಕೊಂಡಿದೆ. ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರ ಮತ ಹೊಡೆದು ಹೋಯಿತು. ಮೂವರು ಕನ್ನಡಿಗ ಜನಪ್ರತಿನಿಧಿಗಳಾದ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ,ಬೆಳಗಾವಿ ಸಂಸದ ಸುರೇಶ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಮತದಾನದಿಂದ ದೂರವುಳಿದರು.
ಅಂತಿಮವಾಗಿ ಎಂಇಎಸ್'ನ ಸಂಜೋತಾ ಬಾಂದೇಕರ್ ಮೇಯರ್ ಆಗಿ ಆಯ್ಕೆಯಾದರೆ, ನಾಗೇಶ್ ಮಾಂಡೋಳಕರ್ ಉಪ ಮೇಯರ್ ಆಗಿ ನೇಮಕವಾದರು.
ಬೆಳಗಾವಿ ಪಾಲಿಕೆ ಬಲಾಬಲ
ಪಾಲಿಕೆಯ ಒಟ್ಟು ಸಸ್ಯ ಬಲ - 61
ಎಂಇಎಸ್ ಒಟ್ಟು ಸದಸ್ಯರು - 32
ಕನ್ನಡಿಗ ಒಟ್ಟು ಸದಸ್ಯರು - 24
ಇತರೆ ಒಟ್ಟು ಸದಸ್ಯರು - 5
ಒಟ್ಟು ಮತಗಳು ೫೭ + ೬ ಮಂದಿ ನಾಮನಿರ್ದೇಶಿತ ಸದಸ್ಯರು
ಒಟ್ಟು ೬೦ ಮಂದಿ ಸದಸ್ಯರು ಮತದಾನ ಮಾಡಬೇಕಿತ್ತು
ರಮೇಶ ಜಾರಕಿಹೊಳಿ ಬೆಂಬಲಿತ ಕನ್ನಡಿಗ ಮೇಯರ್ ಅಭ್ಯರ್ಥಿ ಜಯಶ್ರೀ ಮಾಳಗಿಗೆ ೧೭ ಮತಗಳು
ಸತೀಶ ಜಾರಕಿಹೊಳಿ ಬೆಂಬಲಿತ ಕನ್ನಡಿಗ ಮೇಯರ್ ಅಭ್ಯರ್ಥಿ ಪುಷ್ಪಾ ಪರ್ವತರಾವ್ಗೆ ೧೦ ಮತಗಳು
ಉಪ ಮೇಯರ್ ಕನ್ನಡಿಗ ಅಭ್ಯರ್ಥಿ ಮುಜಮಿಲ್ ಡೋಣಿ ಅವರಿಗೆ ೧೦ ಮತಗಳು
ಉಪ ಮೇಯರ್ ಕನ್ನಡಿಗ ಅಭ್ಯರ್ಥಿ ಫಹೀಮ್ ನಾಯಿಕವಾಡಿ ಅವರಿಗೆ ೧೦ ಮತಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.