ರಾಜ್ಯಪಾಲರ ಘನಘೋರ ಕೃತ್ಯವನ್ನು ಬಿಚ್ಚಿಟ್ಟ ಆ ಮಹಿಳೆ :ಅಷ್ಟಕ್ಕೂ ಷನ್ಮುಗನಾಥನ್ ಮಾಡಿದ್ದೇನು ಗೊತ್ತಾ?

By Suvarna Web DeskFirst Published Jan 28, 2017, 11:19 AM IST
Highlights

ಷನ್ಮುಗನಾಥನ್ ಆಪದನೆಗಳ ಬಗ್ಗೆ  ಪ್ರಧಾನಿಗೆ ದೂರು ನೀಡಿರುವ 98 ಮಂದಿಯಲ್ಲಿ  ಈ ಮಹಿಳೆಯು ಸಹ ಒಬ್ಬರಾಗಿದ್ದಾರೆ. ಆತ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಾಜಭವನವನ್ನು 'ಯುವ ಮಹಿಳೆಯರ ಕ್ಲಬ್ ಆಗಿ ಪರಿವರ್ತಿಸಿಕೊಂಡಿದ್ದರು'ಎಂದು ದೂರಿದ್ದರು.

ನವದೆಹಲಿ(ಜ.28): ಮೇಘಾಲಯ ರಾಜ್ಯದ ರಾಜಭವನದಲ್ಲಿ ಮಹಿಳೆಯರು ಹಾಗೂ ಯುವತಿಯರ ಜೊತೆ ಅಸಭ್ಯ ವರ್ತನೆಯ ಆರೋಪ ಕೇಳಿ ಬಂದ ನಂತರ 2 ದಿನಗಳ ಹಿಂದಷ್ಟೆ ರಾಜ್ಯಪಾಲರಾದ ವಿ. ಷನ್ಮುಗನಾಥನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ರಾಜ್ಯಪಾಲರಾಗಿದ್ದವರಿಂದ ಲೈಂಗಿಂಕ ದೌರ್ಜನ್ಯಕ್ಕೊಳಗಾದ ಮಹಿಳೆಯೊಬ್ಬರು ಷನ್ಮುಗನಾಥನ್ ಕುಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ. 'ನಾನು ಸಂದರ್ಶನಕ್ಕೆ ತೆರಳಿದಾಗ ಷನ್ಮುಗನಾಥನ್ ನನ್ನ ವೈಯುಕ್ತಿಕ ಜೀವನದ ಖಾಸಗಿ ಪ್ರಶ್ನೆಗಳನ್ನೇ ಕೇಳಿದರು ಅಲ್ಲದೆ ಬಲವಂತವಾಗಿ ತಬ್ಬಿಕೊಂಡು ಮುತ್ತನ್ನು ಸಹ ನೀಡಿದರು' ಎಂದು ಎನ್'ಡಿ ಟಿವಿ ವರದಿ ಮಾಡಿದೆ.

ಷನ್ಮುಗನಾಥನ್ ಆಪದನೆಗಳ ಬಗ್ಗೆ  ಪ್ರಧಾನಿಗೆ ದೂರು ನೀಡಿರುವ 98 ಮಂದಿಯಲ್ಲಿ  ಈ ಮಹಿಳೆಯು ಸಹ ಒಬ್ಬರಾಗಿದ್ದಾರೆ. ಆತ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಾಜಭವನವನ್ನು 'ಯುವ ಮಹಿಳೆಯರ ಕ್ಲಬ್ ಆಗಿ ಪರಿವರ್ತಿಸಿಕೊಂಡಿದ್ದರು'ಎಂದು ದೂರಿದ್ದರು.

ರಾಜ್ಯಪಾಲರು ಇಬ್ಬರು ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಅಡುಗೆ ಮಾಡುವವರು, ನರ್ಸ್‌ವೊಬ್ಬರನ್ನು ರಾತ್ರಿ ಪಾಳಿಗೆ ನೇಮಕ ಮಾಡಿಕೊಂಡಿದ್ದರು. ಅವರೆಲ್ಲರೂ ಮಹಿಳೆಯರು. ರಾಜಭವನದ ಕೆಲಸ ಕಾರ್ಯಗಳಿಗೆ ಯುವತಿಯರನ್ನು ಮಾತ್ರವೇ ರಾಜ್ಯಪಾಲರು ನೇಮಿಸಿಕೊಳ್ಳುತ್ತಿದ್ದಾರೆ. ಪುರುಷ ಸಿಬ್ಬಂದಿಯನ್ನು ವರ್ಗಾಯಿಸುತ್ತಿದ್ದಾರೆ ಎಂದು ದೂರುದಾರರು 11 ಅಂಶಗಳ ಪತ್ರದಲ್ಲಿ ವಿವರಿಸಿದ್ದಾರೆ.

ಆರ್'ಎಸ್ಎಸ್ ಹಿನ್ನೆಲೆಯುಳ್ಳ ತಮಿಳುನಾಡು ಮೂಲದ ವಿ. ಷಣ್ಮುಗನಾಥನ್ ಮೇ. 20, 2015ರಿಂದ ಮೇಘಾಲಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಜೊತೆಗೆ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಜೆ.ಪಿ. ರಾಜ್'ಕೋವಾ ಅವರಿಂದ ತೆರವಾದ ಸ್ಥಾನವನ್ನೂ ಹೆಚ್ಚುವರಿ ರಾಜ್ಯಪಾಲರಾಗಿ ಸೆಪ್ಟೆಂಬರ್ 16,2016ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.  

click me!