ಅದೊಂದು ದಿಟ್ಟ ತೀರ್ಮಾನ, ಔಷಧ ಮಾಫಿಯಾಕ್ಕೆ ಬಗ್ಗದ ಅನಂತ

By Web DeskFirst Published Nov 12, 2018, 5:06 PM IST
Highlights

ಅನಂತ ಕುಮಾರ್ ಎಂದರೆ ಅದೊಂದು ಶಕ್ತಿ, ಅದೊಂದು ಸಂಘಟನೆ, ಅಲ್ಲೊಂದು ಪ್ರೇರಣೆ, ಅಲ್ಲೊಂದು ಹೊಸ ಚಿಂತನೆ. ಅಲ್ಲೊಂದು ಮಾರ್ಗದರ್ಶನ,, ಕೇಂದ್ರದಲ್ಲಿ ಎನ್ ಡಿಎ ಅಧಿಕಾರ ಅವಧಿಯಲ್ಲಿ ಅನಂತ್ ಕುಮಾರ್ ವಿವಿಧ ಖಾತೆ ನಿಭಾಯಿಸಿದರು. ಅವರು ನಿಭಾಯಿಸಿದರು ಎನ್ನುವುದಕ್ಕಿಂತ ಅದಕ್ಕೊಂದು ಹೊಸ  ಅರ್ಥ ತಂದು ಕೊಟ್ಟವರು. ಔಷಧ ಮತ್ತು ಸ್ಟಂಟ್ ವಿಚಾರದ ಬಗ್ಗೆ ಹೇಳಲೇಬೇಕು.

ಬೆಂಗಳೂರು[ನ.12]  ಜನರಿಗೆ ಅಗ್ಗದ ದರದಲ್ಲಿ ಔಷಧಿ ದೊರೆಯಲು ಸ್ಥಾಪಿಸಲಾಗಿರುವ ಜನೌಷಧಿ ಕೇಂದ್ರಗಳ ಹಿಂದೆ ಅನಂತ ಕುಮಾರ್ ಪರಿಶ್ರಮವಿದೆ. ಕೇಂದ್ರ ವಿಮಾನಯಾನ, ಪ್ರವಾಸೋದ್ಯಮ, ಸಂಸ್ಕೃತಿ, ಯುವಜನಸೇವಾ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿ, ರಸಗೊಬ್ಬರ ಮತ್ತು ಔಷಧ, ಸಂಸದೀಯ ವ್ಯವಹಾರ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಿದ ಅನಂತ್ ಕುಮಾರ್ ನಮ್ಮನ್ನು ಅಗಲಿದ್ದಾರೆ.

ಅನಂತ್ ಕುಮಾರ್ ಬಗ್ಗೆ ಗೊತ್ತಿಲ್ಲದ ಸಂಗತಿಗಳಿವು

ಔಷಧ ಮಾಫಿಯಾಕ್ಕೆ ಬಗ್ಗದ ಕುಮಾರ: ಸಿಕ್ಕ ಖಾತೆಯಲ್ಲೇ ಕ್ರಾಂತಿಕಾರಕ ಬದಲಾವಣೆ ತಂದಿದ್ದು ಅನಂತ್ ಹಿರಿಮೆ. 10 ಪೈಸೆಯ ಮಾತ್ರೆಯನ್ನು 100 ರೂ.ಗೆ ಮಾರುತ್ತಿದ್ದ ಅತಿದೊಡ್ಡ ಔಷಧ ಮಾಫಿಯಾವನ್ನೇ ಅನಂತ್ ಎದುರು ಹಾಕಿಕೊಂಡಿದ್ದರು. 

ಹೃದಯದ ಸ್ಟಂಟ್‌ ಹಾಗೂ ಮೊಣಕಾಲು ಅಸ್ಥಿಮಜ್ಜೆ ಮರುಜೋಡಣೆ ವೆಚ್ಚವನ್ನು ಶೇ.85ರಷ್ಟು ಇಳಿಕೆ ಮಾಡಿದ್ದು ಇನ್ನೊಂದು ಸಾಧನೆ. ದೇಶಾದ್ಯಂತ 3600 ಜನೌಷಧಿ ಕೇಂದ್ರ ಸ್ಥಾಪಿಸಿ ಕಡಿಮೆ ದರದಲ್ಲಿ ಬಡವರಿಗೆ ಔಷಧ ಲಭ್ಯವಾಗುವಂತೆ ಮಾಡಿದ್ದು, ‘ಸುವಿಧಾ ’ ಜೈವಿಕ ಸ್ಯಾನಿಟರಿ ಪ್ಯಾಡ್‌ ಪೂರೈಕೆ ಆರಂಭಿಸಿದರು. ಆಧಿನಿಕ ಜಗತ್ತಿನಲ್ಲಿ ಕಾಡುವ ಹೃದ್ರೋಗಕ್ಕೆ ಅಗತ್ಯವಾಗಿ ಬೇಕಾಗುವ ಸ್ಟಂಟ್ ಗಳ ದರವನ್ನು ಶೇ. 80 ರಷ್ಟು ಇಳಿಕೆ ಮಾಡಿ ಬಡವರಿಗೂ ಹೃದಯ ಚಿಕಿತ್ಸೆ ಭಾಗ್ಯ ನೀಡಿದ್ದು ಅನಂತ್ ಕುಮಾರ್
 

click me!