ಮನುಷ್ಯನಿಗೆ ಶೀಲ ಎಷ್ಟು ಮುಖ್ಯವೋ ಮಾಧ್ಯಮಕ್ಕೆ ವಿಶ್ವಾಸಾರ್ಹತೆಯೂ ಅಷ್ಟೇ ಮುಖ್ಯ

Published : Nov 18, 2017, 10:51 AM ISTUpdated : Apr 11, 2018, 01:01 PM IST
ಮನುಷ್ಯನಿಗೆ ಶೀಲ ಎಷ್ಟು ಮುಖ್ಯವೋ ಮಾಧ್ಯಮಕ್ಕೆ ವಿಶ್ವಾಸಾರ್ಹತೆಯೂ ಅಷ್ಟೇ ಮುಖ್ಯ

ಸಾರಾಂಶ

ಇವತ್ತಿನ ಮಾಧ್ಯಮಕ್ಕೆ ಓದುಗರು ಬದಲು ಗ್ರಾಹಕರು ಬೇಕಾಗಿದ್ದಾರೆ. ಇವತ್ತು ಓದುಗರು ಮಾಧ್ಯಮವನ್ನು ಉದ್ಯಮಿಗಳ ಕಾಲಬುಡದಲ್ಲಿ ಇಟ್ಟಿದ್ದಾರೆ. ಇದರಿಂದ ಇವತ್ತು ಜನರಲ್ಲಿ ಮಾಧ್ಯಮದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಾಗಿದೆ.

ಸುಳ್ಯ (ನ.18):  ಮಾಧ್ಯಮ ಕ್ಷೇತ್ರದ ಉದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿ ಮಾಧ್ಯಮ ಕ್ಷೇತ್ರ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಮಾಡಿದೆ. ಮನುಷ್ಯನಿಗೆ ಶೀಲ ಎಷ್ಟು ಅತೀ ಮುಖ್ಯವೋ ಮಾಧ್ಯಮ ಕ್ಷೇತ್ರಕ್ಕೆ ವಿಶ್ವಾಸಾರ್ಹತೆ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಸುಳ್ಯದ ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೆವಿಜಿ ಕಾನೂನು ಕಾಲೇಜು ಹಾಗೂ ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕಾ ಸಮೂಹದ ಸಹಭಾಗಿತ್ವದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ‘ಪತ್ರಕರ್ತರಿಗೆ ವೃತ್ತಿ ಕಾರ್ಯಗಾರದಲ್ಲಿ ಮಾಧ್ಯಮದ ಮುಂದಿರುವ ಸವಾಲುಗಳು’ ವಿಷಯದ ಕುರಿತು ಅವರು ಪ್ರಧಾನ ಭಾಷಣ ಮಾಡಿದರು.

ಇವತ್ತಿನ ಮಾಧ್ಯಮಕ್ಕೆ ಓದುಗರು ಬದಲು ಗ್ರಾಹಕರು ಬೇಕಾಗಿದ್ದಾರೆ. ಇವತ್ತು ಓದುಗರು ಮಾಧ್ಯಮವನ್ನು ಉದ್ಯಮಿಗಳ ಕಾಲಬುಡದಲ್ಲಿ ಇಟ್ಟಿದ್ದಾರೆ. ಇದರಿಂದ ಇವತ್ತು ಜನರಲ್ಲಿ ಮಾಧ್ಯಮದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಾಗಿದೆ. ಟಿ.ವಿ ಚಾನೆಲ್‌'ಗಳು ಅತೀರೇಕವಾಗಿ ವರ್ತಿಸುತ್ತಿದೆ. ಮಾದ್ಯಮಗಳು ರಾಜ್ಯ ಸರ್ಕಾರದ ಪ್ರಭುತ್ವದ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಆದರೆ ಕೇಂದ್ರ ಸರ್ಕಾರದ ಪರವಾಗಿ ಮಾಧ್ಯಮಗಳು ಕೆಲಸ ಮಾಡುತ್ತಿದೆ ಎಂದು ಮಟ್ಟು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಗಲಕೋಟೆ ಎನ್‌ಜಿಒ: ಬುದ್ಧಿಮಾಂದ್ಯನಿಗೆ ಹೊಡೆದ ನಾಲ್ವರು ಬಂಧನ
ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಲೋಪ ಆಗಿಲ್ಲ, ತಾಂತ್ರಿಕ ಸಮಸ್ಯೆ ಎಂದ ತಂಗಡಗಿ