ಬೀಚ್'ನಲ್ಲಿ ಮುಳುಗುತ್ತಿದ್ದ ಸಾಗರದ ಇಬ್ಬರು ಯುವಕರ ರಕ್ಷಣೆ

By Suvarna Web DeskFirst Published Nov 18, 2017, 9:29 AM IST
Highlights

ಕಾಪು ಲೈಟ್‌ಹೌಸ್ ಬಳಿಯ ಬಂಡೆಯ ಮೇಲಿಂದ ಸಮುದ್ರಕ್ಕೆ ಸ್ನಾನಕ್ಕಾಗಿ ಹಾರಿದ ಶಿವಮೊಗ್ಗ ಜಿಲ್ಲೆ ಸಾಗರದ ಜೋಗ ರಸ್ತೆಯ ನಿವಾಸಿ ದ್ಯಾಮಣ್ಣ ಎಂಬವರ ಮಗ ತುಕಾರಾಮ (29) ಹಾಗೂ ಮುನಿಯಪ್ಪ ಎಂಬವರ ಮಗ ಸಂತೋಷ್ (29) ಅವರನ್ನು ಕಾಪು ಬೀಚ್ ಲೈಫ್‌ಗಾರ್ಡ್ (ಜೀವರಕ್ಷಕ) ಗಳಾದ ವಿನೀತ್ ಕೋಟ್ಯಾನ್ ಹಾಗೂ ಗೌತಮ್ ರಕ್ಷಿಸಿದ್ದಾರೆ.

ಕಾಪು(ನ.18) ಇಲ್ಲಿನ ಬೀಚ್‌ನಲ್ಲಿ ಸ್ನಾನಕ್ಕೆ ಇಳಿದ ಇಬ್ಬರು ಯುವಕರು ಸಮುದ್ರ ಅಲೆಯಲ್ಲಿ ಕೊಚ್ಚಿಕೊಂಡು ಹೋಗುವಾಗ ಸ್ಥಳೀಯ ಜೀವರಕ್ಷಕರು ಅವರನ್ನು ರಕ್ಷಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕಾಪು ಲೈಟ್‌ಹೌಸ್ ಬಳಿಯ ಬಂಡೆಯ ಮೇಲಿಂದ ಸಮುದ್ರಕ್ಕೆ ಸ್ನಾನಕ್ಕಾಗಿ ಹಾರಿದ ಶಿವಮೊಗ್ಗ ಜಿಲ್ಲೆ ಸಾಗರದ ಜೋಗ ರಸ್ತೆಯ ನಿವಾಸಿ ದ್ಯಾಮಣ್ಣ ಎಂಬವರ ಮಗ ತುಕಾರಾಮ (29) ಹಾಗೂ ಮುನಿಯಪ್ಪ ಎಂಬವರ ಮಗ ಸಂತೋಷ್ (29) ಅವರನ್ನು ಕಾಪು ಬೀಚ್ ಲೈಫ್‌ಗಾರ್ಡ್ (ಜೀವರಕ್ಷಕ) ಗಳಾದ ವಿನೀತ್ ಕೋಟ್ಯಾನ್ ಹಾಗೂ ಗೌತಮ್ ರಕ್ಷಿಸಿದ್ದಾರೆ.

ಗೆಳೆಯರೊಂದಿಗೆ ವಿಹಾರಕ್ಕೆಂದು ಬಂದಿದ್ದ ಅವರು ದೀಪಸ್ತಂಭ ಬಳಿ ಸಮುದ್ರಕ್ಕೆ ಹಾರಿದ್ದಾರೆ. ತೀರಾ ಅಪಾಯಕಾರಿ ಸ್ಥಳವಾಗಿದ್ದ ಅಲ್ಲಿ ಅವರು ಅಲೆಗಳ ಮಧ್ಯೆ ಸಿಲುಕಿ ಮೇಲಕ್ಕೆ ಬರಲು ಒದ್ದಾಡುತ್ತಿದ್ದರು. ಇದನ್ನು ಕಂಡ ಲೈಫ್‌ಗಾರ್ಡ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಅವರಿಬ್ಬರನ್ನು ರಕ್ಷಿಸಿದ್ದಾರೆ ಎಂದು ಕಾಪು ಬೀಚ್ ಡೆವಲಪ್ ಮೆಂಟ್ ಅಧಿಕಾರಿ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ತುಕರಾಮ ಹಾಗೂ ಸಂತೋಷ ಅವರು ಪಡುಬಿದ್ರಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದಾರೆ. ಅವರಿಗೆ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

click me!