ಮಾಂಸ ಮಾರಾಟಕ್ಕೆ ಗಣೇಶ, ಏಸು, ಬುದ್ಧನ ಬಳಕೆ..!

By Suvarna Web DeskFirst Published Sep 7, 2017, 4:33 PM IST
Highlights

ಜಾಹೀರಾತಿನಲ್ಲಿ ಗಣೇಶನ ಜೊತೆ ಕ್ರೈಸ್ತ, ಬುದ್ಧ ಮತ್ತಿತರ ದೇವತೆಗಳು ಊಟದ ಟೇಬಲ್ ಮೇಲೆ ಕುಳಿತು, ಕುರಿಮರಿಯ ಮಾಂಸವನ್ನು ನಾವೆಲ್ಲಾ ಸೇವಿಸಬಹುದು ಎಂದು ಮಾತಾಡಿಕೊಳ್ಳುವ ದೃಶ್ಯವಿದೆ.

ಮೆಲ್ಬರ್ನ್(ಸೆ.07): ಹಿಂದುಗಳ ಆರಾಧ್ಯ ದೇವರಾದ ಗಣೇಶನ ಮೂಲಕ ಕುರಿಮರಿಯ ಮಾಂಸವನ್ನು ಪ್ರಚಾರ ಮಾಡುವ ಜಾಹೀರಾತೊಂದು ಆಸ್ಟ್ರೇಲಿಯಾದಲ್ಲಿ ಹಿಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಮೀಟ್ ಆ್ಯಂಡ್ ಲೈವ್‌'ಸ್ಟಾಕ್ ಆಸ್ಟ್ರೇಲಿಯಾ (ಎಮ್'ಎಲ್‌ಎ) ಎಂಬ ಕಂಪನಿ ಸೆ.4ರಂದು ಈ ಜಾಹೀರಾತನ್ನು ಪ್ರಕಟಿಸಿದೆ.

ಜಾಹೀರಾತಿನಲ್ಲಿ ಗಣೇಶನ ಜೊತೆ ಕ್ರೈಸ್ತ, ಬುದ್ಧ ಮತ್ತಿತರ ದೇವತೆಗಳು ಊಟದ ಟೇಬಲ್ ಮೇಲೆ ಕುಳಿತು, ಕುರಿಮರಿಯ ಮಾಂಸವನ್ನು ನಾವೆಲ್ಲಾ ಸೇವಿಸಬಹುದು ಎಂದು ಮಾತಾಡಿಕೊಳ್ಳುವ ದೃಶ್ಯವಿದೆ.

ಈ ಜಾಹೀರಾತನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಆಸ್ಟ್ರೇಲಿಯಾದಲ್ಲಿನ ಹಿಂದು ಸಮುದಾಯದ ವಕ್ತಾರ ನಿತಿನ್ ವಶಿಷ್ಠ ಆಗ್ರಹಿಸಿದ್ದಾರೆ.

click me!