ಗೌರಿ ಹಂತಕರ ಬೇಟೆಗೆ ಘಟಾನುಘಟಿ ಅಧಿಕಾರಿಗಳ ಎಸ್'ಐಟಿ ತಂಡ; ಎಂಥೆಂಥ ಸ್ಪೆಷಲಿಸ್ಟ್ಸ್ ಇದ್ದಾರೆ ಗೊತ್ತಾ?

Published : Sep 07, 2017, 04:08 PM ISTUpdated : Apr 11, 2018, 01:11 PM IST
ಗೌರಿ ಹಂತಕರ ಬೇಟೆಗೆ ಘಟಾನುಘಟಿ ಅಧಿಕಾರಿಗಳ ಎಸ್'ಐಟಿ ತಂಡ; ಎಂಥೆಂಥ ಸ್ಪೆಷಲಿಸ್ಟ್ಸ್ ಇದ್ದಾರೆ ಗೊತ್ತಾ?

ಸಾರಾಂಶ

ಗೌರಿ ಲಂಕೇಶ್​​ ಹತ್ಯೆಯನ್ನು ಸವಾಲಾಗಿ ಸ್ವೀಕರಿಸಿರುವ ರಾಜ್ಯ ಸರಕಾರ ಈ ಪ್ರಕರಣದ ತನಿಖೆಗೆ ಘಟಾನುಘಟಿ ಅಧಿಕಾರಿಗ ವಿಶೇಷ ತಂಡವನ್ನು ರಚಿಸಿದೆ. ಹಂತಕರ ಬೇಟೆಗಾಗಿ ದಕ್ಷ ಅಧಿಕಾರಿಗಳನ್ನು ಹುಡುಕಿ ಆಯ್ಕೆ ಮಾಡಿದೆ. ಆದರೆ, ಕೆಂಪಯ್ಯಗೆ ತೀರಾ ಆಪ್ತರಾಗಿರುವ ಹಾಗೂ ಗಣಪತಿ ಪ್ರಕರಣದಲ್ಲಿ ಸರ್ಕಾರಕ್ಕೆ ಮುಜುಗರ ಆಗದಂತೆ ಕೆಲಸ ಮಾಡಿದ್ದ ಐಜಿಪಿ ಬಿ.ಕೆ.ಸಿಂಗ್ ಅವರಿಗೆ​ ಎಸ್​ಐಟಿ ನೇತೃತ್ವ ನೀಡಲಾಗಿದೆ.

ಬೆಂಗಳೂರು(ಸೆ. 07): ಗೌರಿ ಲಂಕೇಶ್​​ ಹತ್ಯೆಯನ್ನು ಸವಾಲಾಗಿ ಸ್ವೀಕರಿಸಿರುವ ರಾಜ್ಯ ಸರಕಾರ ಈ ಪ್ರಕರಣದ ತನಿಖೆಗೆ ಘಟಾನುಘಟಿ ಅಧಿಕಾರಿಗ ವಿಶೇಷ ತಂಡವನ್ನು ರಚಿಸಿದೆ. ಹಂತಕರ ಬೇಟೆಗಾಗಿ ದಕ್ಷ ಅಧಿಕಾರಿಗಳನ್ನು ಹುಡುಕಿ ಆಯ್ಕೆ ಮಾಡಿದೆ. ಆದರೆ, ಕೆಂಪಯ್ಯಗೆ ತೀರಾ ಆಪ್ತರಾಗಿರುವ ಹಾಗೂ ಗಣಪತಿ ಪ್ರಕರಣದಲ್ಲಿ ಸರ್ಕಾರಕ್ಕೆ ಮುಜುಗರ ಆಗದಂತೆ ಕೆಲಸ ಮಾಡಿದ್ದ ಐಜಿಪಿ ಬಿ.ಕೆ.ಸಿಂಗ್ ಅವರಿಗೆ​ ಎಸ್​ಐಟಿ ನೇತೃತ್ವ ನೀಡಲಾಗಿದೆ. ಸದ್ಯ ಪ್ರಕರಣ ತನಿಖೆಯನ್ನು ನೋಡಿಕೊಳ್ಳುತ್ತಿರುವ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್​.ಅನುಚೇತ್​'​​ಗೆ ತನಿಖಾಧಿಕಾರಿ ಹೊಣೆಯನ್ನು ಮುಂದುವರೆಸಲಾಗಿದೆ.

ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುವ ತಂಡ:
1) ಐಜಿಪಿ ಬಿ.ಕೆ.ಸಿಂಗ್, ಎಸ್ಐಟಿ ತಂಡದ ನೇತೃತ್ವ
2) ಡಿಸಿಪಿ ಎಂ.ಎನ್.ಅನುಚೇತ್, ತನಿಖಾಧಿಕಾರಿ
3) ಜಿನೇಂದ್ರ ಕಣಗಾವಿ, ಡಿಸಿಪಿ
4) ರವಿಕುಮಾರ್, ಎಸಿಪಿ
5) ಸಕ್ರಿ, ಡಿವೈಎಸ್'ಪಿ
6) ಪ್ರಶಾಂತ್ ಬಾಬು, ಇನ್ಸ್'ಪೆಕ್ಟರ್
7) ಪುನೀತ್, ಇನ್ಸ್'ಪೆಕ್ಟರ್
8) ರಂಗಪ್ಪ ಟಿ., ಇನ್ಸ್'ಪೆಕ್ಟರ್
9) ಹರೀಶ್, ಮೈಸೂರು ಪೊಲೀಸ್ ಅಕಾಡೆಮಿ ಉಪನಿರ್ದೇಶಕ
10) ಜಗನ್ನಾಥ್ ರೈ, ಬಿಎಂಟಿಎಫ್ ಡಿವೈಎಸ್'ಪಿ
11) ಕೆ.ಎಸ್.ನಾಗರಾಜ್, ತುಮಕೂರು ಡಿವೈಎಸ್'ಪಿ
12) ಅನಿಲ್, ಇನ್ಸ್'ಪೆಕ್ಟರ್
13) ಸತ್ಯನಾರಾಯಣ್, ಇನ್ಸ್'ಪೆಕ್ಟರ್
14) ಎಂ.ಮಂಜುನಾಥ್, ಇನ್ಸ್'ಪೆಕ್ಟರ್
15) ಎಂ.ಹರೀಶ್, ಇನ್ಸ್'ಪೆಕ್ಟರ್
16) ಕುಮಾರಸ್ವಾಮಿ, ಇನ್ಸ್'ಪೆಕ್ಟರ್
17) ಕುಲಕರ್ಣಿ, ಇನ್ಸ್'ಪೆಕ್ಟರ್

ಎಂಎನ್ ಅನುಚೇತ್:
ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್​.ಅನುಚೇತ್​ ಅವರಿಗೆ ಈ ಪ್ರಕರಣದ ತನಿಖಾಧಿಕಾರಿಯ ಹೊಣೆ ಹೊರಿಸಲಾಗಿದೆ. ನಂಬಿಕಸ್ಥ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಅನುಚೇತ್ ಹಲವು ಜಿಲ್ಲೆಗಳಲ್ಲಿ ಎಸ್'ಪಿಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಇವರ ಬಗ್ಗೆ ರಾಜ್ಯ ಸರಕಾರಕ್ಕೆ ಅತೀವ ನಿರೀಕ್ಷೆ ಇದೆ.

ಜಿತೇಂದ್ರ ಕಣಗಾವಿ:
ಬೆಂಗಳೂರಿನ ಸಿಸಿಬಿಯ ಡಿಸಿಪಿಯಾಗಿರುವ ಇವರು ಎಂಎಂ ಕಲಬುರ್ಗಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಲಬುರ್ಗಿ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಾಮ್ಯತೆ ಇರುವ ಹಿನ್ನೆಲೆಯಲ್ಲಿ ಅವರನ್ನು ಎಸ್'ಐಟಿ ತಂಡದಲ್ಲಿ ಒಳಗೊಂಡಿರುವ ಸಾಧ್ಯತೆ ಇದೆ. ಮೇಲಾಗಿ ಇವರು ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ. ಕಲಬುರ್ಗಿ ಪ್ರಕರಣದ ತನಿಖೆಯ ಅನುಭವವು ಕಣಗಾವಿಗೆ ಇಲ್ಲಿ ನೆರವಾಗಬಹುದು.

ರವಿಕುಮಾರ್:
ಬಾಣಸವಾಡಿ ಉಪವಿಭಾಗದ ಎಸಿಪಿಯಾಗಿರುವ ರವಿಕುಮಾರ್ ದಕ್ಷತೆಗೆ ಮತ್ತೊಂದು ಹೆಸರು. ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇವರೆಯೇ. ರವಿಕುಮಾರ್ ಅವರು ಬಹಳ ಚಾಕಚಕ್ಯತೆಯಿಂದ ರುದ್ರೇಶ್ ಪ್ರಕರಣವನ್ನು ನಿರ್ವಹಿಸಿದ್ದರು. ಇವರ ಶ್ರಮ ಮತ್ತು ಬುದ್ಧಿವಂತಿಕೆಯಿಂದಾಗಿ ಬಹಳ ಕ್ಷಿಷ್ಟವೆನಿಸಿದ್ದ ರುದ್ರೇಶ್ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವಂತಾಯಿತು.

ಎನ್.ಬಿ.ಸಕ್ರಿ:
ಸದ್ಯ ಹುಬ್ಬಳ್ಳಿ-ಧಾರವಾಡದಲ್ಲಿ ಡಿವೈಎಸ್'ಪಿಯಾಗಿರುವ ಸಕ್ರಿ ಅವರು ಬೆಂಗಳೂರಿನಲ್ಲಿ ಹೆಚ್ಚು ಸಮಯ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಭೇದಿಸುವಲ್ಲಿ ಇವರು ಯಶಸ್ವಿಯಾಗಿದ್ದರು.

ರವಿ:
ಇಂದಿರಾನಗರ ಇನ್ಸ್'ಪೆಕ್ಟರ್ ರವಿ ಕೂಡ ಒಬ್ಬ ದಕ್ಷ ಪೊಲೀಸ್ ಅಧಿಕಾರಿ. 2010ರಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸೈಕೋ ಜೈಶಂಕರ್ ಪ್ರಕರಣವನ್ನು ಇವರು ನಿಭಾಯಿಸಿದ್ದರು. ಸೈಕೋ ಜೈಶಂಕರ್'ನನ್ನು ಮೊದಲ ಬಾರಿ ಬಂಧಿಸಿದ್ದು ಇದೇ ಇನ್ಸ್'ಪೆಕ್ಟರ್ ರವಿ.

ಪ್ರಶಾಂತ್ ಬಾಬು:
ಇನ್ಸ್'ಪೆಕ್ಟರ್ ಪ್ರಶಾಂತ್ ಬಾಬು ತಾಂತ್ರಿಕ ವಿಶ್ಲೇಷಣೆಗೆ ಹೆಸರುವಾಸಿ. ಬಹುತೇಕ ಹೈಪ್ರೊಫೈಲ್ ಕೇಸ್'ಗಳು ಬಂದಾಗ ಪ್ರಶಾಂತ್ ಬಾಬು ನೆರವು ಬೇಕೇಬೇಕು. ಟೆಕ್ನಿಕಲ್ ಆಗಿ ಅನಲೈಸ್ ಮಾಡಿ ಹಂತಕರ ಸುಳಿವು ಪತ್ತೆಹಚ್ಚುವ ಚಾಕಚಕ್ಯತೆ ಪ್ರಶಾಂತ್ ಬಾಬು ಅವರಿಗುಂಟು. ಗೌರಿ ಲಂಕೇಶ್ ಪ್ರಕರಣದಲ್ಲಿ ತಾಂತ್ರಿಕ ಸುಳಿವುಗಳು ಸಾಕಷ್ಟು ಸಿಗುವುದರಿಂದ ಇಲ್ಲಿ ಇವರು ಅಗತ್ಯವಾಗಿ ಬೇಕು.

ಪುನೀತ್:
ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಇನ್ಸ್'ಪೆಕ್ಟರ್ ಆಗಿರುವ ಪುನೀತ್ ಕುಮಾರ್'ಗೆ ಬೆಂಗಳೂರಿನಲ್ಲಿ ಕ್ರಿಮಿನಲ್ ನೆಟ್ವರ್ಕ್ ಬಗ್ಗೆ ಬಹಳಷ್ಟು ಗೊತ್ತು. ರೌಡಿಗಳು, ಚೈನ್'ಸ್ನ್ಯಾಚರ್ಸ್'ಗೆ ಇವರು ಸಿಂಹಸ್ವಪ್ನ. ನಗರದಲ್ಲಿ ಅತೀ ಹೆಚ್ಚು ಸರಗಳ್ಳರನ್ನು ಬಂಧಿಸಿರುವ ಕೀರ್ತಿ ಪುನೀತ್ ಅವರಿಗೆ ಇದೆ. ಎಷ್ಟೇ ಸಣ್ಣ ಸುಳಿವಿದ್ದರೂ ಅದನ್ನೇ ಇಟ್ಟುಕೊಂಡು ಪ್ರಕರಣವನ್ನು ಭೇದಿಸುವ ಬುದ್ಧಿವಂತಿಕೆ ಇವರಿಗೆ ಇದೆ.

ರಂಗಪ್ಪ:
ಬೆಂಗಳೂರಿನಲ್ಲಿ ಸಾಕಷ್ಟು ಕಾಲ ಸೇವೆ ಸಲ್ಲಿಸಿರುವ ಇನ್ಸ್'ಪೆಕ್ಟರ್ ರಂಗಪ್ಪ ಎನ್'ಕೌಂಟರ್ ಸ್ಪೆಷಲಿಸ್ಟ್. ಸಮಾಜಘಾತುಕರ ಪಾಲಿಗೆ ರಣಭೈರವರಂತಾಗುವ ರಂಗಪ್ಪ ಅವರು ರೌಡಿ ಕುಣಿಗಲ್ ಗಿರಿಯನ್ನು ಎನ್'ಕೌಂಟರ್ ಮಾಡಿ ಮುಗಿಸಿದ್ದರು. ಬಾಣಸವಾಡಿ, ಅಶೋಕನಗರ, ಕೆಜೆ ಹಳ್ಳಿ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಇವರು ಕೆಲಸ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!