ರೈಲಿನಲ್ಲಿ ಶುದ್ಧ ಆಹಾರ ಪೂರೈಕೆ : ಖಾಸಗಿಯೊಂದಿಗೆ ಕೈಜೋಡಿಸಿದ ಐಆರ್‌ಸಿಟಿಸಿ

First Published Jun 4, 2018, 1:31 PM IST
Highlights

ರೈಲಿನಲ್ಲಿ ಶುದ್ಧ ಹಾಗೂ ತಾಜಾ ಆಹಾರ ವಿತರಣೆ ಮಾಡಲು ಇದೀಗ ಭಾರತೀಯ ರೈಲ್ವೆ ಕ್ಯಾಟರಿಂಗ್ ಸರ್ವೀಸ್ ಖಾಸಗಿ ಆಹಾರ ವಿತರಣಾ ಸೇವೆಗಳೊಂದಿಗೆ ಕೈ ಜೋಡಿಸಿದೆ.  
 

ನವದೆಹಲಿ :  ರೈಲಿನಲ್ಲಿ ಶುದ್ಧ ಹಾಗೂ ತಾಜಾ ಆಹಾರ ವಿತರಣೆ ಮಾಡಲು ಇದೀಗ ಭಾರತೀಯ ರೈಲ್ವೆ ಕ್ಯಾಟರಿಂಗ್ ಸರ್ವೀಸ್ ಖಾಸಗಿ ಆಹಾರ ವಿತರಣಾ ಸೇವೆಗಳೊಂದಿಗೆ ಕೈ ಜೋಡಿಸಿದೆ.  

ಟಿಆರ್‌ಎಪಿಐಜಿಒ ಮತ್ತು ಬಿ2ಬಿಯಂತಹ ಆಹಾರ ವಿತರಣಾ ಸೇವೆಗಳೊಂದಿಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಶುದ್ಧ  ಆಹಾರವನ್ನು ವಿತರಣೆ ಮಾಡುವ ಯೋಜನೆ ಆರಂಭಿಸಿದೆ.   

ಪ್ರಮುಖವಾಗಿ ಆಯಾ ಪ್ರದೇಶಗಳಲ್ಲಿ ಇರುವ  ಪ್ರಮುಖ ರೆಸ್ಟೊರೆಂಟ್ ಗಳಿಂದ ಆಹಾರವನ್ನು ಈ ಮೂಲಕ ರೈಲಿನಲ್ಲಿ ವಿತರಣೆ ಮಾಡಲಾಗುತ್ತದೆ. ಇದಕ್ಕೆ ಡೆಲಿವರಿ ಬಾಯ್‌ಗಳನ್ನು ನೇಮಕ ಮಾಡಿಕೊಂಡು ಅವರಿಗೆ ವಿಶೇಷ ರೀತಿಯ ಸಮವಸ್ತ್ರಗಳನ್ನು ನಿಡಲಾಗುತ್ತದೆ. 

ಇನ್ನು ರೈಲಿನಲ್ಲಿ ಶುದ್ಧ ಆಹಾರವನ್ನು ಪಡೆದು ಕೊಳ್ಳಲು www.ecatering.irctc.co.in  ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಥವಾ  Food-on-track ಆ್ಯಪ್  ಮೂಲಕ ಆರ್ಡರ್ ಮಾಡಬಹುದಾಗಿದೆ.

click me!