ಅಧಿಕಾರ ಹಿಡಿಯಲು ಕಾಂಗ್ರೆಸ್​​ ‘ಬೃಹತ್​​’ ರಣತಂತ್ರ

Published : Sep 14, 2016, 08:37 AM ISTUpdated : Apr 11, 2018, 12:46 PM IST
ಅಧಿಕಾರ ಹಿಡಿಯಲು ಕಾಂಗ್ರೆಸ್​​ ‘ಬೃಹತ್​​’ ರಣತಂತ್ರ

ಸಾರಾಂಶ

ಬೆಂಗಳೂರು(ಸೆ.14): ಬೆಂಗಳೂರು ಮೇಯರ್​​​ ಹಾಗೂ ಉಪ ಮೇಯರ್​​​ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಮತ್ತೊಮ್ಮೆ ಮೇಯರ್​​ ಗಾದಿ ಹಿಡಿಯಲು ಕಾಂಗ್ರೆಸ್​​ ರಣತಂತ್ರ ಹೆಣೆದಿದೆ. ಜೆಡಿಎಸ್​​ ಜೊತೆ ಮೈತ್ರಿ ಬಿದ್ದರೆ ಈ ರಣತಂತ್ರ ಹೆಣೆದಿದೆ. 

ಮೇಯರ್ ಹಾಗೂ ಉಪ-ಮೇಯರ್ ಚುನಾವಣೆ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್​​​ ಹೊಸ ಹೆಸರುಗಳ ಸೇರ್ಪಡೆ ಮಾಡಿದೆ. ರಾಜ್ಯಸಭಾ ಸದಸ್ಯರಾದ ಆಸ್ಕರ್​ ಫರ್ನಾಂಡಿಸ್​, ಜೈರಾಂ ರಮೇಶ್​​, ಪರಿಷತ್​ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್​​.ಬಿ.ತಿಮ್ಮಾಪುರ, ಎನ್​​.ಎಸ್​​.ಬೋಸರಾಜು ಹೆಸರನ್ನು ಸೇರ್ಪಡೆ ಮಾಡಿ ತಮ್ಮ ಮತದಾರರ ಪಟ್ಟಿಯನ್ನು ಹೆಚ್ಚಿಕೊಂಡಿದೆ. 

ಇವರಲ್ಲದೇ ನಾಮನಿರ್ದೇಶಿತ ಪರಿಷತ್​ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಗೃಹ ಸಚಿವ ಹಾಗೂ ಪರಿಷತ್​ ಸದಸ್ಯ ಪರಮೇಶ್ವರ್​​ ಹೆಸರೂ ಕೂಡಾ ಸೇರ್ಪಡೆಯಾಗಿದೆ. ಇದ್ರ ಜೊತೆಗೆ ಸಚಿವ ಡಿ.ಕೆ.ಶಿವಕುಮಾರ್ ಸಂಬಂಧಿ ಹಾಗೂ ಪರಿಷತ್​​ ಸದಸ್ಯ ರವಿ ಹೆಸರು ಕೂಡಾ ಸೇರ್ಪಡೆ ಯಾಗುವಸಾಧ್ಯತೆ ಇದೆ. ಇವರೆಲ್ಲರ ಹೆಸರುಗಳನ್ನ ಕಾಂಗ್ರೆಸ್​​​ ಕಳೆದ ತಿಂಗಳು ಆತುರವಾಗಿ ಸೇರ್ಪಡೆ ಮಾಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!