
ಬೆಂಗಳೂರು : ಸದ್ಯ ಬಿಜೆಪಿಯ ಬಂಡಾಯ ನಾಯಕರಾದ ಎನ್.ಆರ್.ರಮೇಶ್ಗೆ ಜೆಡಎಸ್ಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬೇಸತ್ತು ಜೆಡಿಎಸ್ ನಾಯಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.
N R ರಮೇಶ್ ಜೆಡಿಎಸ್ಗೆ ಬಂದರೆ ಚಿಕ್ಕಪೇಟೆಯಲ್ಲೇ ಟಿಕೆಟ್ ಗ್ಯಾರಂಟಿಯಾಗಿದ್ದು, ಸದ್ಯ ಚಿಕ್ಕಪೇಟೆಯಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ಪಕ್ಷವಿದೆ.
N R ರಮೇಶ್ರನ್ನು ಜೆಡಿಎಸ್ಗೆ ಸೇರಿಸಿಕೊಳ್ಳಲು ನಾಯಕರೂ ಕೂಡ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಉಂಟಾದ ಅಸಮಾಧಾನದ ಲಾಭವನ್ನು ಪಡೆಲು ಜೆಡಿಎಸ್ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ರಮೇಶ್ ಜೊತೆ ಮಾತುಕತೆ ಮುಂದುವರೆಸಲು ಜೆಡಿಎಸ್ ನಾಯಕರು ಆಸಕ್ತಿ ತೋರಿದ್ದು, ನಿನ್ನೆ ರಾತ್ರಿಯೇ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆದಿದ್ದು, ವಾರದೊಳಗೆ ಈ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.