
ಕೋಲ್ಕತ್ತಾ(ಮೇ.03): ಸಾಮಾನ್ಯವಾಗಿ ವಧು ಹಾಗೂ ವರ ಬೇಕಾಗಿದ್ದಾನೆ ಎಂಬ ಜಾಹೀರಾತಿನಲ್ಲಿ ಜಾತಿ,ಧರ್ಮ, ಬಣ್ಣ, ಉದ್ಯೋಗ, ಆಸ್ತಿ ಮುಂತಾದ ಬೇಡಿಕೆಗಳಿರುತ್ತವೆ.
ಕೋಲ್ಕತ್ತಾದ ಬಂಗಾಲಿ ಪತ್ರಿಕೆಯೊಂದರಲ್ಲಿ ವರ ಬೇಕಾಗಿದ್ದಾನೆ ಎಂಬ ಜಾಹೀರಾತಿನಲ್ಲಿ ಕೇಳಿರುವ ಬೇಡಿಕೆಯನ್ನು ನೋಡಿದರೆ ಆಶ್ಚರ್ಯ ಪಡುತ್ತೀರಿ. ಇವರು ಇಟ್ಟಿರುವ ಬೇಡಿಕೆ ಭಾರತದ ರಾಜಕೀಯ ಚಿಂತನೆಗಳನ್ನು ಹೊಂದಿರುವ ಗಂಡು. ಇವರಿಗೆ 'ಕಮ್ಯೂನಿಸ್ಟ್ ಗಂಡು' ಬೇಕಾಗಿದ್ದಾನೆ.
ಕೋಲ್ಕಾತ್ತಾದ ನಿವಾಸಿಯಾದ 'ದೋಪಾನುಜ್ ದಾಸ್'ಗುಪ್ತ' ಎಂಬುವವರು ತಮ್ಮ 25 ವರ್ಷ ವಯಸ್ಸಿನ ಸಹೋದರಿಗೆ ಎಡರಂಗ ಚಿಂತನೆಗಳುಳ್ಳ ಹಾಗೂ ರಾಜಕೀಯ ಉದ್ದೇಶಗಳುಳ್ಳ ವರ ಬೇಕಾಗಿದ್ದಾನಂತೆ.
'ದೋಪಾನುಜ್ ದಾಸ್'ಗುಪ್ತ' ಸಹೋದರಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಈಕೆಗೆ ಕಮ್ಯೂನಿಸ್ಟ್ ವಿಚಾರಧಾರೆಗಳುಳ್ಳ ವರನನ್ನು ಹುಡುಕುತ್ತಿದ್ದಾರೆ. ಕೂತಹಲ ಸಂಗತಿಯಂದರೆ ಕಮ್ಯೂನಿಸ್ಟ್ ಸೇರಿದಂತೆ ಯಾವುದೇ ಪಕ್ಷದ ರಾಜಕೀಯ ಕಾರ್ಯಕರ್ತನಲ್ಲ ಆಕೆಯೂ ಒಡಹುಟ್ಟಿದ ತಂಗಿಯಲ್ಲ ದತ್ತುಪಡೆದವಳು. ಈಕೆ ಒಂದು ವರ್ಷದವಳಿದ್ದಾಗ ದತ್ತು ಪಡೆಯಲಾಗಿತ್ತು. ಬಹುಶಃ ಇದೇ ಮೊದಲಬಾರಿಗೆ ನಾವು ರೀತಿಯ ಜಾಹೀರಾತನ್ನು ನೋಡಿರುವುದಾಗಿ ಹಲವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.