
ಬೆಂಗಳೂರು: ಪಾಠ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಖಾಸಗಿ ಶಾಲೆಯ ಗಣಿತ ಶಿಕ್ಷಕನನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನವೆಂಬರ್'ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲಿಯಾಸ್ ನಗರದ ಹಾರೋನ್ ಪಾಷಾ (28) ಬಂಧಿತ. ಆರೋಪಿಯು ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ 10ನೇ ತರWÜತಿಯ ವಿದ್ಯಾರ್ಥಿನಿಯ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಬಳಿಕ ಪಾಠ ಹೇಳಿಕೊಡುವುದಾಗಿ ತರಗತಿಯಲ್ಲಿ ಒಬ್ಬಳನ್ನೇ ಕೂರಿಸಿಕೊಂಡು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ. ದಿನ ಕಳೆದಂತೆ ಪ್ರೀತಿಸುತ್ತಿರುವುದಾಗಿ ಬಾಲಕಿಗೆ ಹೇಳಿದ್ದ. ಆಕೆ ನಿರಾಕರಿಸಿದಾಗ ಕ್ಷಮೆ ಕೇಳಿ ಸುಮ್ಮನಿದ್ದ. ಮತ್ತೆ ಕೆಲ ದಿನಗಳ ಬಳಿಕ ಪ್ರೀತಿ ನಿವೇದಿಸಿದ್ದ. ಈ ವೇಳೆ ಆಕೆ ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಈ ವೇಳೆ ಆತನನ್ನು ಶಾಲೆಯಿಂದ ತೆಗೆದು ಹಾಕಲಾಗಿತ್ತು.
ಕೆಲ ತಿಂಗಳು ನಾಪತ್ತೆಯಾಗಿದ್ದ ಆರೋಪಿಯು ಮತ್ತೆ ಶಾಲೆ ಬಳಿ ಬಂದು ಬಾಲಕಿಯ ಬಳಿ ಕ್ಷಮೆ ಕೇಳಿದ್ದ. ಹೆಚ್ಚು ಅಂಕಗಳಿಸಲು ಸಹಾಯವಾಗುವಂತೆ ಪಾಠ ಮಾಡುವುದಾಗಿ ಆಕೆಯ ಜೊತೆ ಮಾತನಾಡಲು ಆರಂಭಿಸಿದ್ದ. ಹೀಗೆ ಒಂದು ದಿನ ಕಾಫಿ ಕುಡಿಯುವ ನೆಪವೊಡ್ಡಿ ಬಾಲಕಿಯನ್ನು ಜಯನಗರದ ಹೋಟೆಲ್‌ವೊಂದಕ್ಕೆ ಕರೆದೊಯ್ದು ಪಾನೀಯದಲ್ಲಿ ಮತ್ತುಬರುವ ಮಾತ್ರೆ ಬರೆಸಿ ಕುಡಿಸಿದ್ದ. ಬಳಿಕ ರೂಮ್ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಮನೆಗೆ ತೆರಳಿದ್ದ ಬಾಲಕಿ ತಂದೆಗೆ ಘಟನೆ ಕುರಿತು ವಿವರಿಸಿದ್ದು, ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.