ಜಯಚಂದ್ರ ಪುತ್ರನ ವಿವಾದ: ಬೇನಾಮಿ ಹೆಸರಲ್ಲಿ ಕಾರು, ಬೈಕ್ ಖರೀದಿ?

By Suvarna Web DeskFirst Published Dec 13, 2016, 5:52 AM IST
Highlights

ತ್ರಿಜೇಶ್‌ ತನ್ನ ಐಷಾರಾಮಿ ಬೈಕ್‌ ಡುಕಾಟಿ​ಯನ್ನು ಗ್ರೇ (ಸುಂಕ ಮರೆಮಾಚುವುದು) ಮಾರುಕಟ್ಟೆಮೂಲಕ ಸ್ವದೇಶಕ್ಕೆ ತರಿಸಿಕೊಂಡಿ​ದ್ದಾರೆ ಎನ್ನಲಾಗಿದೆ. ಅಮೆರಿಕಾದಿಂದ ದುಬೈಗೆ, ಇಲ್ಲಿಂದ ಮಂಗಳೂರು ಅಥವಾ ಚೆನ್ನೈಗೆ ಹಡಗಿನಲ್ಲಿ ತರಿಸಿಕೊಂಡು ಬಳಿಕ ಬೆಂಗಳೂರಿಗೆ ತಂದಿರುವ ಸಾಧ್ಯತೆಯಿದೆ.

ಬೆಂಗಳೂರು: ಆದಾಯ ತೆರಿಗೆ, ಜಾರಿ ನಿರ್ದೇಶನಾಲ ಯದ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿ ಬಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯ ಕಾರ್ಯಕ್ರಮಾಧಿಕಾರಿ ಎಸ್‌.ಸಿ. ಜಯಚಂದ್ರ ಅವರಿಗೆ ಸಂಬಂಧಿಸಿದ ಬೇ​ನಾಮಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಜಯಚಂದ್ರ ಪುತ್ರ ತ್ರಿಜೇಶ್‌ ಬಳಿ ಇರುವ ಐಷಾರಾಮಿ ಬೈಕ್‌ ಹಾಗೂ ಎರಡು ಕಾರುಗಳು ಬೇನಾಮಿ ಹೆಸರಿನಲ್ಲಿದೆ. ಆದರೆ, ವಿಳಾಸ, ಹಿನ್ನೆಲೆ ಯಾವುದೂ ದಾಖಲಾಗಿಲ್ಲ. ರೂ.80 ಲಕ್ಷ ಮೌಲ್ಯದ 1199 ಆರ್‌ ಸರಣಿ ಡುಕಾಟಿ ಬೈಕ್‌ ಅನ್ನು 2014ರಲ್ಲಿ ಅಮೆರಿಕ​ದಲ್ಲಿ ಖರೀದಿಸಲಾಗಿದ್ದು, ಅಲ್ಲೇ ಮೂರ್ನಾ​ಲ್ಕು ತಿಂಗಳು ಚಲಾಯಿಸಿ, ಅದೇ ವರ್ಷ ಸೆಪ್ಟೆಂಬರ್‌'ನಲ್ಲಿ ಇಲ್ಲಿಗೆ ತರಲಾಗಿದೆ. ಆದರೆ, ಆರ್‌'ಟಿಒದಲ್ಲಿ ನೋಂದಾಯಿಸಿಲ್ಲ. ವಾರಾಂತ್ಯ ಅಥವಾ ಒಮ್ಮೊಮ್ಮೆ ಮೋಜಿಗಾಗಿ ಮಾತ್ರ ತ್ರಿಜೇಶ್‌ ಬಳಸುತ್ತಿದ್ದರಿಂದ ಇದು ಆರ್‌'ಟಿಒ ಅಧಿಕಾರಿಗಳ ಗಮನಕ್ಕೂ ಬರಲಿಲ್ಲ ಎಂಬ ಅಂಶವನ್ನು ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಈ ಬೈಕ್‌ ಅನ್ನು ಅಮೆರಿಕದಲ್ಲಿ ಲಿಂಗಪ್ಪ ಎಂಬ ಹೆಸರಿನಲ್ಲಿ ಖರೀದಿಸಲಾಗಿದೆ. ಇವರು ಯಾರು ಎಂಬುದು ಸ್ವತಃ ಡುಕಾಟಿ ಕಂಪೆನಿಯ ಅಧಿಕಾರಿಗಳಿಗೇ ಮಾಹಿತಿ ಇಲ್ಲ. ಈ ಬೈಕ್‌ ಅನ್ನು ಉಪಯೋಗಿಸಿದ ವಸ್ತುಗಳು (ಸೆಕೆಂಡ್‌ ಹ್ಯಾಂಡ್‌) ಎಂದು ನಗರಕ್ಕೆ ತಂದಿದ್ದಾರೆ. 

ಇನ್ನು, ಐಷಾರಾಮಿ ಸ್ಪೋರ್ಟ್ಸ್ ಕಾರುಗಳು, ಪೋರ್ಶೆ, ಲಂಬೋರ್ಗಿನಿ ಕಾರುಗಳನ್ನು ಸ್ವದೇಶದಲ್ಲೇ ಖರೀದಿಸಲಾಗಿದೆ. ಇದು ಬೇನಾಮಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಹಾರ್ದಿಕ್‌'ಗೌಡ ಹೆಸರಿನಲ್ಲಿ ಕಾರು​ಗಳನ್ನು ಖರೀದಿಸಲಾಗಿದೆ. ಈ ಹಾರ್ದಿ​ಕ್‌ ಗೌಡ ಯಾರೆಂಬುದು ಪತ್ತೆಯಾಗಿಲ್ಲ. ಈತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ರೂ.20 ಕೋಟಿ ಮೌಲ್ಯದ ವಾಹನ​ಗಳನ್ನು ಬಳಸುತ್ತಿದ್ದಾರೆಂಬುದು ದಾಳಿ ವೇಳೆ ಪತ್ತೆಯಾಗಿದೆ ಎಂದು ತನಿಖಾಧಿಕಾರಿಯೊಬ್ಬರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

‘ಗ್ರೇ' ಮಾರುಕಟ್ಟೆಮೂಲಕ ರವಾನೆ?: ತ್ರಿಜೇಶ್‌ ತನ್ನ ಐಷಾರಾಮಿ ಬೈಕ್‌ ಡುಕಾಟಿ​ಯನ್ನು ಗ್ರೇ (ಸುಂಕ ಮರೆಮಾಚುವುದು) ಮಾರುಕಟ್ಟೆಮೂಲಕ ಸ್ವದೇಶಕ್ಕೆ ತರಿಸಿಕೊಂಡಿ​ದ್ದಾರೆ ಎನ್ನಲಾಗಿದೆ. ಅಮೆರಿಕಾದಿಂದ ದುಬೈಗೆ, ಇಲ್ಲಿಂದ ಮಂಗಳೂರು ಅಥವಾ ಚೆನ್ನೈಗೆ ಹಡಗಿನಲ್ಲಿ ತರಿಸಿಕೊಂಡು ಬಳಿಕ ಬೆಂಗಳೂರಿಗೆ ತಂದಿರುವ ಸಾಧ್ಯತೆಯಿದೆ. 

ವಿದೇಶಿ ನಿರ್ಮಿತ ಬೈಕ್‌ ಹಾಗೂ ಕಾರುಗಳು ಭಾರತಕ್ಕೆ ಆಮದು ಮಾಡಿಸಿಕೊಳ್ಳುವ ಮೊ​ದಲು ಇಂಪೋರ್ಟ್‌ ಡ್ಯೂಟಿ ಪಾವತಿಸಬೇಕು. ವಾಹನದ ಬೆಲೆಗೆ ಅನುಗುಣವಾಗಿ ಸುಂಕ​ವನ್ನು ಶೇ.100-200ರಷ್ಟುಕಟ್ಟಲೇಬೇಕು. ಆದರೆ, ತ್ರಿಜೇಶ್‌ ಬೈಕ್‌'ನ್ನು ಉಪಯೋಗಿಸಿದ ವಸ್ತು ಗಳು (ಸೆಕೆಂಡ್‌ ಹ್ಯಾಂಡ್‌) ಎಂದು ನಮೂದಿಸಿ ದ್ದಾರೆ. ಆದರೂ ಇಂಪೋರ್ಟ್‌ ಡ್ಯೂಟಿ ಪಾವತಿ ಸಿ, ಸ್ಥಳೀಯ ಸಾರಿಗೆ ಇಲಾಖೆಯಲ್ಲಿ ನೊಂದಾಯಿಸಬೇಕು. ಹಡಗಿನ ಮೂಲಕ ಬೈಕ್‌ ತರಿಸಿಕೊಳ್ಳುವ ಮೂಲಕ ತ್ರಿಜೇಶ್‌ ನಿಯಮ ಉಲ್ಲಂಘಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸಾರಿಗೆ ನಿಯಮ ಏನು ಹೇಳುತ್ತೆ?
ಐಷಾರಾಮಿ ಬೈಕ್‌ ಖರೀದಿ ಮಾಡಿರುವ ತ್ರಿಜೇಶ್‌ ಸಾರಿಗೆ ಇಲಾಖೆಯಲ್ಲಿ ನೊಂದಾಯಿಸಿಲ್ಲ. ತೆರಿಗೆಯನ್ನು ಪಾವತಿ ಮಾಡಿಲ್ಲ. ಉದಾಹರಣೆಗೆ ವಿದೇಶದಲ್ಲಿ ರೂ.80 ಲಕ್ಷ ಬೈಕ್‌ ಖರೀದಿ ಮಾಡಿದ್ದರೆ, ಅಲ್ಲಿಂದ ಇಲ್ಲಿಗೆ ತರುವಾಗ ಇಂಪೋರ್ಟ್‌ ಡ್ಯೂಟಿ ಅಂದಾಜು ರೂ.50 ಲಕ್ಷ ಪಾವತಿಸಬೇಕು. ಆಗ ಒಟ್ಟಾರೆ ಬೈಕ್‌ನ ಮೌಲ್ಯ ರೂ.1.30 ಕೋಟಿ ಆಗುತ್ತದೆ. ಇದನ್ನು ಸಾರಿಗೆ ಇಲಾಖೆ ಗಮನಕ್ಕೆ ತರದಿದ್ದರೆ, ತಿಂಗಳಿಗೆ ಶೇ.1ರಷ್ಟುಎಂಬಂತೆ ಬೈಕ್‌ ನಗರದಲ್ಲಿ ಸಂಚರಿಸುತ್ತಿರುವ ದಿನಾಂಕದಿಂದ ದಂಡ ವಿಧಿಸಲಾಗುತ್ತದೆ. ಇನ್ನು ಐಷಾ ರಾಮಿ ಕಾರುಗಳಿಗೆ ಶೇ. 18.89ರಷ್ಟುಜತೆಗೆ ನಿಯಮ ಮೀರಿದರೆ ದಂಡ ಸೇರಿ ಮಾಸಿಕ ವಾಗಿ ಶೇ.1ರಷ್ಟುತೆರಿಗೆ ಪಾವತಿ ಮಾಡಬೇಕೆಂದು ಸಾರಿಗೆ ಇಲಾಖೆ ಮೂಲಗಳು ಹೇಳಿವೆ. 

(epaper.kannadaprabha.in)

click me!