ತೋಟಗಾರಿಕ ಸಚಿವರ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಹೆಸರಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ

Published : Jun 15, 2017, 11:50 AM ISTUpdated : Apr 11, 2018, 12:57 PM IST
ತೋಟಗಾರಿಕ ಸಚಿವರ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಹೆಸರಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ

ಸಾರಾಂಶ

ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಕೃಷಿ ಭಾಗ್ಯ ಹೆಸರಲ್ಲಿ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದನ್ನು ಸುವರ್ಣ ನ್ಯೂಸ್  ಕವರ್ ಸ್ಟೋರಿ ತಂಡ ಬಯಲು ಮಾಡಿದೆ. ಕುತೂಹಲಕಾರಿ ವಿಷಯವೆಂದರೆ ಇದು ನಡೆದಿರುವುದು ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೇ  ಆಗಿದೆ. ರೈತರ ಹೆಸರಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ಏಜೆಂಟರು ತಿಂದು ತೇಗಿದ್ದಾರೆ.

ದಾವಣಗೆರೆ: ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಕೃಷಿ ಭಾಗ್ಯ ಹೆಸರಲ್ಲಿ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದನ್ನು ಸುವರ್ಣ ನ್ಯೂಸ್  ಕವರ್ ಸ್ಟೋರಿ ತಂಡ ಬಯಲು ಮಾಡಿದೆ.

ಕುತೂಹಲಕಾರಿ ವಿಷಯವೆಂದರೆ ಇದು ನಡೆದಿರುವುದು ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೇ  ಆಗಿದೆ. ರೈತರ ಹೆಸರಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ಏಜೆಂಟರು ತಿಂದು ತೇಗಿದ್ದಾರೆ.  ಕೃಷಿ ಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ ಮಾಹಿತಿಯೇ ಇಲ್ಲ

ಸರ್ಕಾರಿ ಮಹತ್ವಾಕಾಂಕ್ಷಿ ಯೋಜನೆ ಅಕ್ರಮ ಎರಡು ಮೂರು ಜಿಲ್ಲೆಗಷ್ಟೇ ಸೀಮಿತವಾಗಿಲ್ಲ, ಸ್ವತಃ  ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೇ ಬಹುದೊಡ್ಡ ಅಕ್ರಮ ನಡೆದಿದೆ.  ಸುವರ್ಣನ್ಯೂಸ್ ಫಲಾನುಭವಿಗಳ ಪಟ್ಟಿ ಹಿಡಿದು ಹೊರಟಾಗ ಒಬ್ಬೊಬ್ಬ ಯೋಜನಾ  ಫಲಾನುಭವಿ ಒಂದೊಂದು ರೀತಿಯಲ್ಲಿ ಮೋಸಹೋಗಿದ್ದಾನೆ. ಸರ್ಕಾರಿ ಅಧಿಕಾರಿಗಳು,ಇಂಜಿನಿಯರ್ ಯೋಜನೆ ಫಲಾನುಭವಿಯಾದ್ರೆ ಇನ್ನೊಂದು ಪ್ರಕರಣದಲ್ಲಿ ಅನಕ್ಷರಸ್ಥ ಫಲಾನುಭವಿಗೆ ಯೋಜನೆಗೆ ಮಾಹಿತಿ ಇಲ್ಲ. ಒಂದು ತಾಲ್ಲೂಕಿನಲ್ಲಿ ಮಧ್ಯವರ್ತಿಯೊಬ್ಬನ ಕಮಿಷನ್ ದಂಧೆ ಅಮಾಯಕ ರೈತರನ್ನು ವಂಚಿಸಿದೆ.

ಜಗಳೂರು ತಾಲ್ಲೂಕಿನಾದ್ಯಂತ ನೆರಳು ಪರದೆಯ ದೊಡ್ಡ ಅಕ್ರಮವೇ ನಡೆದಿದ್ದು ಅಲ್ಲಿನ ಅಧಿಕಾರಿಗಳು ಅಕ್ಷರಶಃ ರೈತರ ಹಣ ನುಂಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ನೆರಳು ಪರದೆಯಿರುವ 18 ಕ್ಷೇತ್ರಗಳಲ್ಲಿ ಕನಿಷ್ಠ 15 ಕ್ಕು ಹೆಚ್ಚು ಸ್ಥಳಗಳಲ್ಲಿ ನೆರಳು ಪರದೆ ಮಳೆಗಾಳಿಗೆ ಹಾರಿಹೋಗಿದೆ.

ಆದರೆ ಈ ಬಗ್ಗೆ ಮಳೆಗಾಳಿಗೆ ಹರಿದುಹೋಗಿದೆ ಎಂದು ಯಾವೊಬ್ಬ ರೈತನು ಇಲಾಖೆಗೆ ಒಂದು ಸಣ್ಣ ಮನವಿಯನ್ನು ಮಾಡಿಲ್ಲ. ಮಳೆ ಇಲ್ಲದ ಕಾರಣ ಬೋರ್' ವೆಲ್ 'ನಲ್ಲಿ ನೀರು ಒಣಗಿ ಪಾಲಿಹೌಸ್  ಕೃಷಿ ಮಾಡಲಾಗುತ್ತಿಲ್ಲ ಎಂದು ರೈತರು ಸಬೂಬು ಹೇಳುತ್ತಾರೆ.

ಆದರೆ ಮಳೆ ಕೊರತೆ ನಡುವೆಯು ಅದ್ಭುತ ಕೃಷಿ ಮಾಡಿರುವ ಅಲ್ಲೊಂದು ಇಲ್ಲೊಂದು ಪ್ರಕರಣಗಳಿವೆ. ತೋಟಗಾರಿಕಾ ಸಚಿವರ ಜಿಲ್ಲೆಯಲ್ಲಿ  ನೆರಳು ಪರದೆಯಲ್ಲಿ ಬಹುದೊಡ್ಡ ಅಕ್ರಮ ನಡೆದಿದ್ದು ಪ್ರಾಮಾಣಿಕ ತನಿಖೆ ನಡೆದು ತಪ್ಪಿತಸ್ಥರಿಗೆ ಒಂದಿಷ್ಟು ಶಿಕ್ಷೆಯಾಗಲಿ ಎಂಬುದು ಸುವರ್ಣನ್ಯೂಸ್ ನ ಆಶಯ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ