ಗೇಲ್'ಗೆ ಮತ್ತೆ ಸಂಕಷ್ಟ..!

Published : Oct 26, 2017, 11:01 AM ISTUpdated : Apr 11, 2018, 12:53 PM IST
ಗೇಲ್'ಗೆ ಮತ್ತೆ ಸಂಕಷ್ಟ..!

ಸಾರಾಂಶ

ಗೇಲ್ ಟವೆಲ್ ಬಿಚ್ಚಿದಾಗ, ಅವರನ್ನು ನೋಡಲಾಗದೇ ಕಣ್ಣು ಮುಚ್ಚಿಕೊಂಡೆ. ಅಲ್ಲಿ ನಿಲ್ಲಲಾಗದೇ ರೂಂನಿಂದ ಹೊರಗೆ ಓಡಿ ಬಂದು ಸುಮಾರು ಎರಡರಿಂದ ಎರಡುವರೆ ಗಂಟೆ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಅದರ ಹಿಂದಿನ ರಾತ್ರಿ ವೆಸ್ಟ್ ಇಂಡೀಸ್'ನ ಮತ್ತೋರ್ವ ಕ್ರಿಕೆಟಿಗ ಡ್ವೇನ್ ಬ್ರಾವೋ ನನಗೆ 'ಸೆಕ್ಸಿ' ಎಂದು ಮೆಸೇಜ್ ಮಾಡಿದ್ದರು ಎಂದು ಲಿಯಾನೆ ರಸೆಲ್ ತಿಳಿಸಿದ್ದಾರೆ.

ಸಿಡ್ನಿ(ಅ.26): ಮಹಿಳಾ ಮಸಾಜ್ ಥೆರಪಿಸ್ಟ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂದಿಸಿದಂತೆ ಕೆರಿಬಿಯನ್ ಬ್ಯಾಟ್ಸ್'ಮನ್ ಕ್ರಿಸ್ ಗೇಲ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ವೆಸ್ಟ್‌'ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ನನ್ನ ಜತೆ ಅಸಭ್ಯವಾಗಿ ವರ್ತಿಸಿದ್ದು ನಿಜ ಎಂದು ಮಹಿಳಾ ಮಸಾಜ್ ಥೆರಪಿಸ್ಟ್ ಲಿಯಾನೆ ರಸೆಲ್, ನ್ಯೂ ಸೌಥ್ ವೇಲ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 2015ರ ಐಸಿಸಿ ವಿಶ್ವಕಪ್ ವೇಳೆ ಸಿಡ್ನಿ ಮೈದಾನದ ಡ್ರೆಸ್ಸಿಂಗ್ ಕೊಠಡಿಯಲ್ಲಿ ಈ ಘಟನೆ ನಡೆಯಿತು ಎಂದು ಅವರು ತಿಳಿಸಿದ್ದಾರೆ.

‘ನಾನು ಟವಲ್ ತೆಗೆದುಕೊಳ್ಳಲೆಂದು ಡ್ರೆಸ್ಸಿಂಗ್ ಕೊಠಡಿಗೆ ತೆರಳಿದೆ. ಅಲ್ಲಿದ್ದ ಗೇಲ್ ಏನು ಬೇಕು ಎಂದು ಕೇಳಿದರು. ನಾನು ಟವಲ್ ಬೇಕು ಎಂದಾಗ, ತಾವು ಉಟ್ಟಿದ್ದ ಟವಲನ್ನೇ ಬಿಚ್ಚಿ ನನಗೆ ಕೊಡಲು ಬಂದರು. ಅವರ ವರ್ತನೆಯಿಂದ ನಾನು ಇಡೀ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ’ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ಗೇಲ್ ಟವೆಲ್ ಬಿಚ್ಚಿದಾಗ, ಅವರನ್ನು ನೋಡಲಾಗದೇ ಕಣ್ಣು ಮುಚ್ಚಿಕೊಂಡೆ. ಅಲ್ಲಿ ನಿಲ್ಲಲಾಗದೇ ರೂಂನಿಂದ ಹೊರಗೆ ಓಡಿ ಬಂದು ಸುಮಾರು ಎರಡರಿಂದ ಎರಡುವರೆ ಗಂಟೆ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಅದರ ಹಿಂದಿನ ರಾತ್ರಿ ವೆಸ್ಟ್ ಇಂಡೀಸ್'ನ ಮತ್ತೋರ್ವ ಕ್ರಿಕೆಟಿಗ ಡ್ವೇನ್ ಬ್ರಾವೋ ನನಗೆ 'ಸೆಕ್ಸಿ' ಎಂದು ಮೆಸೇಜ್ ಮಾಡಿದ್ದರು ಎಂದು ಲಿಯಾನೆ ರಸೆಲ್ ತಿಳಿಸಿದ್ದಾರೆ.

ಈ ಮೊದಲು ತಾವು ಮಸಾಸ್ ಥೆರಪಿಸ್ಟ್ ಜೊತೆ ಅಸಭ್ಯವಾಗಿ ವರ್ತಿಸಿಲ್ಲ. ತಮ್ಮ ವಿರುದ್ಧ ಸುಳ್ಳು ವರದಿ ಮಾಡಿದ ಆಸೀಸ್ ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಗೇಲ್ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್