ಸ್ವಚ್ಛ ಕೋಲಾರ; ಅಧ್ಯಯನ ಮಾಡಲು ಬಂತು ವಿದೇಶೀ ತಂಡ

Published : Oct 26, 2017, 09:57 AM ISTUpdated : Apr 11, 2018, 01:05 PM IST
ಸ್ವಚ್ಛ ಕೋಲಾರ; ಅಧ್ಯಯನ ಮಾಡಲು ಬಂತು ವಿದೇಶೀ ತಂಡ

ಸಾರಾಂಶ

* ಕೋಲಾರ ದೇಶದಲ್ಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ * ಜಿಲ್ಲೆಯ ರಾಮಸಂದ್ರ ಗ್ರಾಮಕ್ಕೆ ವಿದೇಶಿಗರ ಭೇಟಿ * ಒಂಬತ್ತು ದೇಶಗಳ 14 ಜನರ ಟೀಮ್ ವಿಸೀಟ್ * ಗ್ರಾಮದಲ್ಲಿನ ಸ್ವಚ್ಛತೆ ಕಂಡು ವಿದೇಶಿಗರು ಫುಲ್​ಖುಷ್​

ಕೋಲಾರ(ಅ. 26): ದೇಶದಲ್ಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿರುವ ಕೋಲಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶಿ ವಿದ್ಯಾರ್ಥಿಗಳು ಈ ಜಿಲ್ಲೆಗೆ ಭೇಟಿ ನೀಡಿ  ಬಯಲುಮುಕ್ತ ಶೌಚವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿದ್ದಾರೆ. ಕೋಲಾರ ತಾಲೂಕಿನ ಕೋಡಿ ರಾಮಸಂದ್ರ ಗ್ರಾಮಕ್ಕೆ ಭೇಟಿ ನೀಡಿದ 9 ದೇಶಗಳ 14 ಪ್ರತಿನಿಧಿಗಳು ಶೌಚಾಲಯ ನಿರ್ಮಾಣ ಪ್ರಗತಿ ಪರಿಶೀಲಿದ್ದಾರೆ. ಹೈದರಾಬಾದ್​ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಗೆ ಅಧ್ಯಯನಕ್ಕೆಂದು ಆಗಮಿಸಿದ್ದ ಈ ವಿದೇಶೀ ವಿದ್ಯಾರ್ಥಿಗಳು ಕೋಲಾರದ ಸಾಧನೆ ಕೇಳಿ ಇಲ್ಲಿಗೆ ಆಗಮಿಸಿದ್ದಾರೆ. ಕೋಲಾರವು ದೇಶದಲ್ಲೇ ಬಯಲುಶೌಚ ಮುಕ್ತ ಜಿಲ್ಲೆ ಎಂದು ಖ್ಯಾತಿ ಪಡೆದಿದ್ದು, ಸ್ವಚ್ಛಭಾರತ ಅಭಿಯಾನಕ್ಕೆ ಮಾದರಿಯಾಗಿದೆ. ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನವು ಅಭಿವೃದ್ಧಿಶೀಲ ರಾಷ್ಟ್ರಗಳ ಗಮನ ಸೆಳೆಯುತ್ತಿರುವುದು ಗಮನಾರ್ಹ. ಕೋಲಾರಕ್ಕೆ ಭೇಟಿ ನೀಡಿದ್ದ ವಿದೇಶೀ ವಿದ್ಯಾರ್ಥಿಗಳು ಸ್ವಚ್ಛ ಭಾರತ ಅಭಿಯಾನವು ಇತರ ರಾಷ್ಟ್ರಗಳಿಗೆ ಸ್ಫೂರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್