ಸವಲತ್ತಿನ ಆಸೆಗಾಗಿ ಈ ಜೋಡಿ ಮಾಡಿದ್ದೇನು?: ಸಿಕ್ಕಿ ಬಿದ್ದಿದ್ದೇಗೆ?

By Web DeskFirst Published Aug 3, 2018, 7:02 PM IST
Highlights

ಸರ್ಕಾರಿ ಸವಲತ್ತಿನ ಆಸೆಗಾಗಿ ಹಸೆಮಣೆ ಏರಿದ ಜೋಡಿ! ಮದುವೆಯಾಗಿ 2 ವರ್ಷವಾಗಿದ್ದರೂ ಮತ್ತೆ ಮದುವೆ! ಸಾಮೂಹಿಕ ವಿವಾಹ ಸಂದರ್ಭದಲ್ಲಿ ಮತ್ತೊಮ್ಮೆ ಮದುವೆ! ಮಗುವಿಗೆ ಎದೆಹಾಲು ಉಣಿಸಿ ಸಿಕ್ಕಿ ಬಿದ್ದ ದಂಪತಿ

ಲಕ್ನೋ(ಆ.3): ಈಗಾಗಲೇ ಮದುವೆಯಾಗಿರುವ ಜೋಡಿಯೊಂದು ಸರ್ಕಾರದ ಸವಲತ್ತಿನ ಆಸೆಗಾಗಿ ಎಂಬಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಲ್ಲಿ ಭಾಗವಹಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.  ನಡೆದಿದೆ.

ಇಲ್ಲಿನ  ಖುಷಿನಗರದ ನೆಬುವಾ ನೌರಂಗಿಯಾ ಎಂಬಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಜಾತಶಂಕರ್‌ ತ್ರಿಪಾಠಿ ಭಾಗಿಯಾಗಿದ್ದರು. 

ಮದುವೆಯಲ್ಲಿ ಭಾಗಿಯಾಗಿ ಆಗ ತಾನೇ ಮಾಂಗಲ್ಯ ಕಟ್ಟಿಸಿಕೊಂಡಿದ್ದ ವಧು, ಬದಿಗೆ ಬಂದು ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸುವುದನ್ನು ಕಂಡು ಹಲವರು ಜಿಜ್ಞಾಸೆಗೊಳಗಾಗಿದ್ದಾರೆ. ಅನುಮಾನ ಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಮಗು ನವ ವಧುವಿನದ್ದೇ ಎಂದು ತಿಳಿದು ಬಂದಿದೆ. ಮಮತಾ ಎಂಬ ಆಕೆಗೆ 2 ವರ್ಷಗಳ ಹಿಂದೆ ಪ್ರದೀಪ್‌ ಎಂಬಾತನೊಂದಿಗೆ ವಿವಾಹವಾಗಿತ್ತು ಎನ್ನುವುದು ತಿಳಿದು ಬಂದಿದೆ. 

ಈ ಹಿನ್ನೆಲೆಯಲ್ಲಿ ವಂಚಕ ದಂಪತಿಗಳ ಖಾತೆಗೆ ಜಮಾವಣೆಗೊಂಡಿರುವ ಹಣವನ್ನು ಹಿಂಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ದಂಪತಿ ವಿರುದ್ಧ ಎಫ್ಐಆರ್‌ ಕೂಡ ದಾಖಲಿಸುವುದಾಗಿ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ವಧುವಿನ ಖಾತೆಗೆ 20 ಸಾವಿರ ರೂಪಾಯಿ ಮತ್ತು 10 ಸಾವಿರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸರ್ಕಾರದ ಸರಕಾರದ ವತಿಯಿಂದ ನೀಡಲಾಗುತ್ತದೆ. ಆಯೋಜಕರಿಗೆ 6 ಸಾವಿರ ರೂಪಾಯಿ ನೆರವನ್ನೂ ನೀಡಲಾಗುತ್ತಿದೆ.

click me!