ನಿಲ್ಲದ ಯುಐಡಿಎಐ ಅವಾಂತರ: ಗೊಂದಲ ಮೂಡಿಸಿದ ಟೋಲ್ ಫ್ರೀ ನಂಬರ್!

Published : Aug 03, 2018, 05:45 PM IST
ನಿಲ್ಲದ ಯುಐಡಿಎಐ ಅವಾಂತರ: ಗೊಂದಲ ಮೂಡಿಸಿದ ಟೋಲ್ ಫ್ರೀ ನಂಬರ್!

ಸಾರಾಂಶ

ಯುಐಡಿಎಐ ಅವಾಂತರ ನಿಲ್ಲೋದು ಯಾವಾಗ?! ಗೊಂದಲ ಮೂಡಿಸಿದ ಟೋಲ್ ಫ್ರೀ ನಂಬರ್! ಬಳಕೆದಾರರ ಫೋನ್ ನಲ್ಲಿ ಏಕಾಏಕಿ ಜೋಡಣೆ! ಸ್ಮಾರ್ಟ್ ಪೋನ್  ಬಳಕೆದಾರರಲ್ಲಿ ಗೊಂದಲ

ನವದೆಹಲಿ(ಆ.3): ವಿಶಿಷ್ಠ ಗುರುತು ಪ್ರಾಧಿಕಾರದ  ಟ್ರೋಲ್ ಫ್ರೀ ಸಹಾಯವಾಣಿ ನಂಬರ್ ಇದೀಗ ಜನರನ್ನು ಗೊಂದಲದಲ್ಲಿ ಸಿಲುಕಿಸಿದೆ. ಕಾರಣ ಬಳಕೆದಾರ ಗಮನಕ್ಕೆ ತರದೇ  ಟೋಲ್ ಫ್ರೀ ಸಹಾಯವಾಣಿ ನಂಬರ್ ನ್ನು ಫೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು  ಸ್ಮಾರ್ಟ್ ಪೋನ್  ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರ, ತಾನು ಯಾವುದೇ ಟೆಲಿಕಾಂ ಸಂಸ್ಥೆಗೆ ಟೋಲ್ ಫ್ರೀ ಸಹಾಯವಾಣಿ ನಂಬರ್ ಸೇರಿಸುವಂತೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿಂದೆ ಇದ್ದ 1800-300 ಸಹಾಯವಾಣಿ ಸಂಖ್ಯೆ ಜೊತೆಗೆ  1947  ಹೊಸ  ನಂಬರ್  ಪೋನ್ ಬುಕ್ಸ್ ನಲ್ಲಿ ಕಾಣಿಸಿಕೊಂಡಿದೆ. ಆಧಾರ್ ಕಾರ್ಡ್ ಇರುವ, ಇಲ್ಲದಿರುವ ಅಥವಾ  ಆಧಾರ್ ಆ್ಯಪ್ ಜೋಡಣೆ ಮಾಡಿರುವ, ಮಾಡದಿರುವ ಎಲ್ಲಾ ಪೋನ್ ಗಳಲ್ಲಿ  ಸಹಾಯವಾಣಿ ನಂಬರ್ ಬರುತ್ತಿದೆ. 

ಬಳಕೆದಾರರ ಗಮನಕ್ಕೆ ತರದೇ   ಟೋಲ್ ಫ್ರೀ ಸಹಾಯವಾಣಿ ನಂಬರ್ ನ್ನು ಸಂಪರ್ಕಿತರ ಪಟ್ಟಿಯಲ್ಲಿ ಏಕೆ ಸೇರಿಸಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಿ ಎಂದು ಫ್ರೆಂಚ್ ಭದ್ರತಾ ತಜ್ಞ ಎಲ್ಲಿಯಟ್  ಅಲ್ಡರ್ ಸನ್  ಟ್ವೀಟರ್ ಮೂಲಕ ಯುಐಡಿಎಐಯನ್ನು ಪ್ರಶ್ನಿಸಿದ್ದಾರೆ.

ಆದರೆ ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರ, ಟ್ರೋಲ್ ಫ್ರೀ ಸಹಾಯವಾಣಿ ನಂಬರ್ ನ್ನು ಸೇರಿಸುವಂತೆ ತಾನು ಈ ರೀತಿಯ ಯಾವುದೇ ಆದೇಶ ನೀಡಿಲ್ಲ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿರುದ್ಯೋಗದ ಭೀತಿ,ಇಂಜಿನಿಯರಿಂಗ್‌ ಕೋರ್ಸ್‌ಗಳಲ್ಲಿ ಕಂಪ್ಯೂಟರ್‌ ಸೈನ್ಸ್‌ ಸೀಟ್‌ಗಳಿಗೆ ಇನ್ನು ಮಿತಿ!
ಬೆಂಗಳೂರು ವಿವಿ ಫಲಿತಾಂಶ: ಫೇಲಾಗಿದ್ದ 400 ವಿದ್ಯಾರ್ಥಿಗಳೂ ಪಾಸ್!