ಮದುವೆ ಎಂದರೆ ಹೆಂಡತಿ ಸದಾ ಸಿದ್ಧಳಾಗಿರಬೇಕು ಎಂದಲ್ಲ!

By Web DeskFirst Published Jul 18, 2018, 6:49 PM IST
Highlights

ಮದುವೆ ಆದ ಮಾತ್ರಕ್ಕೆ ಸದಾ ಗಂಡು ಮತ್ತು ಹೆಣ್ಣು ಪರಸ್ಪರ ಲೈಂಗಿಕ ಸಂಪರ್ಕಕ್ಕೆ ಸಿದ್ಧರಾಗಿ ಇರಬೇಕು ಎಂದೇನಿಲ್ಲ ಎಂದು ದೆಹಲಿ ಹೖಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಅನೇಕ ಅನುಮಾನಗಳಿಗೆ ತೆರೆ ಎಳೆದಿದೆ.

ನವದೆಹಲಿ[ಜು.18]  ಮದುವೆಯಾಗಿರುವ ಕಾರಣಕ್ಕಾಗಿ ಪತಿ ಜತೆ ಪತ್ನಿ ದೈಹಿಕ ಸಂಪರ್ಕ ಹೊಂದಲು ಸಿದ್ಧವಾಗಿರಬೇಕಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೇ ಒತ್ತಾಯದ ಬೇಡಿಕೆಯನ್ನು ಅತ್ಯಾಚಾರ ಎಂದು ಪರಿಭಾವಿಸಬಹುದು ಎಂದು ಹೇಳಿದೆ’.

ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಮತ್ತು ನ್ಯಾ.ಸಿ.ಹರಿಶಂಕರ್‌ ನೇತೃತ್ವದ ಪೀಠ ಮಂಗಳವಾರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮದುವೆ ಎಂಬ ಸಂಬಂಧದಲ್ಲಿ ಪತಿ ಅಥವಾ ಪತ್ನಿಗೆ ದೈಹಿಕ ಸಂಬಂಧ ಬೇಡ ಎನ್ನುವ ಹಕ್ಕಿದೆ. ಸಮಾಗಮಕ್ಕೆ ಪತ್ನಿಯಾದವಳು ಯಾವತ್ತೂ ಸಿದ್ಧವಾಗಿಯೇ ಇರಬೇಕು ಎಂಬ ನಿಯಮವಿಲ್ಲ.  ಪರಸ್ಪರರಲ್ಲಿ ಸಮ್ಮತಿ ಇರಬೇಕಾಗುತ್ತದೆ ಎಂದು ಹೇಳಿದೆ.

ಮದುವೆ ನಂತರದ ಒತ್ತಡದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಭಾವಿಸಬಹುದೆ? ಎಂಬ ವಿಚಾರದ ಕುರಿತಾಗಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದು. ಹರಿಯಾಣ ಮೂಲದ ಎನ್ ಜಿಒ ಒಂದು ನ್ಯಾಯಾಲಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

click me!