
ನವದೆಹಲಿ[ಜು.18]: ಸೇನೆಯಲ್ಲಿ ಶಿಸ್ತು, ಪಾರದರ್ಶಕತೆ ತರುವಲ್ಲಿ ಈಗಾಗಲೆ ಹಲವು ಕ್ರಮಗಳನ್ನು ಜರುಗಿಸಿರುವ ಭಾರತೀಯ ಸೇನೆ ಬೊಜ್ಜು ಅಧಿಕಾರಿಗಳಿಗೆ ನಿರ್ದಾಕ್ಷಿಣ್ಯ ಜರುಗಿಸಲು ಮುಂದಾಗಿದೆ.
ಬೊಜ್ಜು ಹೊಂದಿರುವ ಅಧಿಕಾರಿಗಳಿದ್ದರೆ ಮುಲಾಜಿಲ್ಲದೆ ಬೊಜ್ಜು ಅಧಿಕಾರಿಗಳೆಂದು ಪ್ರಮಾಣ ಪತ್ರ ನೀಡಿ ಎಂದು ಮಿಲಿಟರಿ ವೈದ್ಯರುಗಳಿಗೆ ಸೇನಾ ಮುಖ್ಯ ಕಚೇರಿಯಿಂದ ಎಚ್ಚರಿಕೆಯ ಸಂದೇಶ ನೀಡಲಾಗಿದೆ.
ಇತ್ತೀಚಿಗಷ್ಟೆ ನಾಲ್ವರು ಅಧಿಕಾರಿಗಳು ಸೇವಾ ಅವಧಿಯಲ್ಲಿಯೇ ಹೃದಯಾಘಾತ ಹಾಗೂ ಇತರ ಜೀವನ ಶೈಲಿ ಕಾರಣದಿಂದ ಮೃತಪಟ್ಟ ಕಾರಣ ವೈದ್ಯರುಗಳಿಗೆ ಎಚ್ಚರಿಕೆ ನೀಡಿದೆ.
ಕಳೆದ ತಿಂಗಳು ಜೂನ್ 10 ರಂದು ನಡೆದ ಭೂಸೇನಾ ಮುಖ್ಯಾಧಿಕಾರಿಗಳ ಸಭೆಯಲ್ಲಿ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಬೊಜ್ಜು ಅಧಿಕಾರಿಗಳಿದ್ದರೆ ನಿಯಮಗಳನ್ನು ಉಲ್ಲಂಘಿಸಬಾರದೆಂದು ತಿಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ಬೊಜ್ಜು ಹೊಂದಿರುವ ಅಧಿಕಾರಿಗಳು ಬಡ್ತಿ,ವಿದೇಶಿ ಹುದ್ದೆಗಳು ಹಾಗೂ ವೃತ್ತಿ ಮಾರ್ಗದರ್ಶನ ವೃದ್ಧಿಸುವ ಕೋರ್ಸ್'ಗಳಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಕಳೆದ ವರ್ಷದ ಆಗಸ್ಟ್'ನಲ್ಲಿ ಕೆಲವು ನಿಯಮಗಳನ್ನು ರೂಪಿಸಲಾಗಿತ್ತು.
ನಿಯಮಗಳ ಪ್ರಕಾರ ಸೇನೆಯಲ್ಲಿ ಬೊಜ್ಜನ್ನು ಹೊಂದಿರುವ ಅಧಿಕಾರಿಗಳು ನಿರಂತರ ಚಿಕಿತ್ಸೆಗೆ ಒಳಗಾಗಿ ಉತ್ತಮ ಆರೋಗ್ಯವನ್ನು ಹೊಂದಬೇಕಿರುವುದು ಕಡ್ಡಾಯವಾಗಿದೆ. ಆಹಾರ ಕ್ರಮದಲ್ಲೂ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅಧಿಕಾರಿಗಳು ಸೇರಿದಂತೆ ಯುವ ಸೈನಿಕರು ಅನಾರೋಗ್ಯ, ಜೀವನಶೈಲಿ ಬದಲಾವಣೆ ಮುಂತಾದ ಕಾರಣಗಳಿಂದ ಮೃತಪಡುತ್ತಿರುವುದು ಸೇನಾ ಮುಖ್ಯಸ್ಥರ ಕಳವಳಕ್ಕೆ ಕಾರಣವಾಗಿದೆ.
ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Army wages war on obesity, warns doctors against declaring overweight officers as fit
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.