
ಪುಣೆ [ಜೂ.19] : ಬಂಗಾರದ ವ್ಯಾಪಾರಿಗೆ ವಂಚಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಟಿವಿ ನಟ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ.
25 ಲಕ್ಷ ರು.ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಾಠಿ ಟಿವಿ ನಟ ಮಿಲಿಂದ್ ದಸ್ತಾನೆ, ಪತ್ನಿ ಸಯಾಲಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಮಿಲಿಂದ್ ಪತ್ನಿ ಸಯಾಲಿ ಅವರು ಚಿನ್ನ ವಜ್ರ ಸೇರಿದಂತೆ ಹಲವು ಆಭರಣಗಳನ್ನು ಕಳೆದ ವರ್ಷ ಕೊಂಡಿದ್ದು, ಕೆಲವೇ ದಿನಗಳಲ್ಲಿ ಬಡ್ಡಿ ಸೇರಿಸಿ ಹಣ ಮರಳಿಸುವುದಾಗಿ ಹೇಳಿದ್ದರು.ಅಲ್ಲದೇ ಮುಂಬೈ ನಲ್ಲಿ ಆಸ್ತಿ ಇದ್ದು, ಇದನ್ನು ಮಾರಾಟ ಮಾಡಿದ ಬಳಿಕ ಸಂಪೂರ್ಣ ಹಣ ನೀಡುವುದಾಗಿ ತಿಳಿಸಿದ್ದರು.
'ಅಪ್ಪಾಜಿಗೆ ಕೋಟ್ಯಧಿಪತಿ ಶೋ ತುಂಬಾ ಇಷ್ಟ'!
ಆದರೆ ಒಂದು ವರ್ಷ ಕಳೆದರೂ ಕೂಡ ಗಾಡ್ಗಿಲ್ ಆಭರಣ ಅಂಗಡಿಗೆ ಹಣ ನೀಡದ ಹಿನ್ನೆಲೆ ದೂರು ದಾಖಲಿಸಿದ್ದು, ಮಿಲಿಂದ್ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು.ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಪತ್ನಿ ಇಬ್ಬರನ್ನು ಬಂಧಿಸಲಾಗಿದೆ
ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.