
ಬೆಂಗಳೂರು [ಆ.02]: ರಾಜ್ಯದಲ್ಲಿ ಮೈತ್ರಿ ರಚನೆ ಮಾಡಿಕೊಂಡ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಉರುಳಿ ಅಧಿಕಾರ ಕಳೆದುಕೊಂಡು ಆತಂಕ ಎದುರಾದ ಬೆನ್ನಲ್ಲೇ ಜೆಡಿಎಸ್ ಗೆ ಕೊಂಚ ಸಮಾಧಾನದ ಸಂಗತಿಯೊಂದು ಇಲ್ಲಿದೆ.
ಹಲವು ನಾಯಕರು ಕೈ ಕೊಟ್ಟು ಬಲ ಕಡಿಮೆಯಾದ ಜೆಡಿಎಸ್ ಗೆ ಇದೀಗ ಸವಿತ ಸಮಾಜದ ನೂರಾರು ಮುಖಂಡರು ಜೆಡಿಎಸ್ ಸೇರ್ಪಡೆಯಾಗಿ ಬಲ ತುಂಬಿದ್ದಾರೆ.
ವಿಶ್ವನಾಥ್‌ಗೆ ಪಾಠ ಕಲಿಸಲು ದೇವೇಗೌಡ್ರಿಂದ ಮಾಸ್ಟರ್ ಪ್ಲಾನ್!
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ನೇತೃತ್ವದಲ್ಲಿ ನೂರಾರು ಮುಖಂಡರು ಪಕ್ಷ ಸೇರ್ಪಡೆಯಾಗಿದ್ದಾರೆ. ಜೆಪಿ ನಗರದ ಪ್ರಧಾನಿ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಪಕ್ಷ ಸೇರಿದ್ದಾರೆ.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ : JDS ನಲ್ಲಿ ಊಹಿಸದ ಬೆಳವಣಿಗೆ
ರಾಜ್ಯದಲ್ಲಿ ಶೀಘ್ರವೇ ಶಾಸಕರು ಅನರ್ಹಗೊಂಡ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇಲ್ಲಿ ನಡೆಯುವ ಚುನಾವಣೆಯಲ್ಲಿ ಏಕಾಂಗಿಯಾಗಿ ಪಕ್ಷ ಸ್ಪರ್ಧೆ ಮಾಡುತ್ತಿದ್ದು, ಸವಿತಾ ಸಮಾಜನ ಬೆಂಬಲ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.