
ಬಳ್ಳಾರಿ [ಆ.02] : ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆಯಾಗಿ ವಾರಗಳು ಕಳೆದಿದೆ. ಆದರೆ ಇನ್ನೂ ಕೂಡ ಸಚಿವ ಸಂಪುಟ ಮಾತ್ರ ವಿಸ್ತರಣೆಯಾಗಿಲ್ಲ.
ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಶ್ರೀ ರಾಮುಲು ಸಂಪುಟ ವಿಸ್ತರಣೆ ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧರ ಕೈಗೊಳ್ಳಲಿದೆ ಎಂದರು.
ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಪ್ರತಿಕ್ರಿಯಿಸಿದ ಶ್ರೀ ರಾಮುಲು ಈ ಬಗ್ಗೆ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಹೈ ಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧ. ನಾನು ರಾಜ್ಯಕ್ಕೆ ನಾಯಕ ಯಾವುದೇ ಜಿಲ್ಲೆಗೆ ಸೀಮಿತವಾದ ವ್ಯಕ್ತಿಯಲ್ಲ. ನನ್ನಂತಹ ನಾಯಕರು ಬಹಳ ಬಿಜೆಪಿಯಲ್ಲಿದ್ದಾರೆ ಎಂದರು.
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ನೂತನ ಸಿಎಂ BSY
ಇನ್ನು ಅತೃಪ್ತರಿಗೆ ಬಿಜೆಪಿ ಸ್ಥಾನಮಾನ ನೀಡುವ ಬಗ್ಗೆ ಪರೋಕ್ಷ ಸುಳಿವು ನೀಡಿದ ಶ್ರೀ ರಾಮುಲು, ನಾವು ಮಂತ್ರಿಗಿರಿಗೆ ಲಾಬಿ ಮಾಡಿದರೆ ಅನರ್ಹರನ್ನು ಯಾರು ನೋಡಬೇಕು. ಅವರಿಗೂ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಎಂದು ಅವರ ಸಹಾಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಬಿಎಸ್‌ವೈ ವಿಧಾನಸೌಧಕ್ಕೆ ಬರುವುದನ್ನು ತಿಳಿಯಲು ಕಚೇರಿಗೆ ಸೈರನ್ ಅಳವಡಿಕೆ!
ಇನ್ನು ರಾಜ್ಯದಲ್ಲಿ ಶಿಘ್ರವೇ ಉಪ ಚುನಾವಣೆ ನಡೆಯಲಿದ್ದು, ಅನರ್ಹರಾದ ಶಾಸಕರ 17 ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹಗಲಿರುಳು ಶ್ರಮಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.