ಭಾರತ್ ಬಯೋಟೆಕ್ ಸಂಸ್ಥೆಯ ಎಂಡಿಯನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ಅಮೆರಿಕದ ಸಂಸ್ಥೆಯಿಂದಲೂ ಪ್ರಶಸ್ತಿ ಪಡೆದ ಭಾರತ್ ಬಯೋಟೆಕ್
ವಿದೇಶಿ ಲಸಿಕೆ ಮಾಡಲಾಗದ ಕೆಲಸವನ್ನು ಭಾರತದ ಲಸಿಕೆ ಮಾಡಿದೆ ಎಂದ ಸಿಜೆಐ ಎನ್ ವಿ ರಮಣ
ನವದೆಹಲಿ (ಡಿ.24): ದೇಶದಲ್ಲಿ ಔಷಧೀಯ ವಿಜ್ಞಾನಗಳಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಂ. ಎಲ್ಲಾ (Bharat Biotech MDs Dr Krishna M. Ella ) ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಂ. ಎಲ್ಲಾ (Joint MD Suchitra M Ella) ಅವರನ್ನು ಶ್ಲಾಘನೆ ಮಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ (Chief Justice of India NV Ramana), ಈ ಕಂಪನಿ ತಯಾರಿಸಿದ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೈದರಾಬಾದ್ ನಲ್ಲಿ (Hyderabad ) ಗುರುವಾರ ನಡೆದ ರಾಮನೇನಿ ಫೌಂಡೇಷನ್ (Rameneini foundation) ಸಮಾರಂಭದಲ್ಲಿ ಮಾತನಾಡಿದ ಭಾರತದ ಮುಖ್ಯ ನ್ಯಾಯೂರ್ತಿ ಎನ್ ವಿ ರಮಣ, ಕೋವ್ಯಾಕ್ಸಿನ್ (Covaxin ) ಲಸಿಕೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಲಸಿಕೆಗಳ ಬಗ್ಗೆ ಇಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಸಾಕಷ್ಟು ಅಧ್ಯಯನ ವರದಿಗಳನ್ನು ಗಮನಿಸಿದ್ದೇನೆ. ಕೋವ್ಯಾಕ್ಸಿನ್ ಲಸಿಕೆ ಕೋವಿಡ್-19 ವೈರಸ್ ಗೆ ಪರಿಣಾಮಕಾರಿಯಾಗಿದ್ದು, ಹೊಸ ಹೊಸ ರೂಪಾಂತರಗಳಿಂದಲೂ ರಕ್ಷಣೆಯನ್ನು ಒದಗಿಸುತ್ತಿದೆ. ಅದರೆ, ಹಲವರು ಈ ಲಸಿಕೆಯನ್ನು ಭಾರತದಲ್ಲಿ ಅಭಿವೃದ್ಧಿ ಮಾಡಿದ್ದು ಎನ್ನುವ ಏಕೈಕ ಕಾರಣಕ್ಕೆ ಟೀಕೆ ಮಾಡಿದರು. ವಿಶ್ವ ಆರೋಗ್ಯ ಸಂಸ್ಥೆಗೂ (WHO) ಈ ಕುರಿತಂತೆ ದೂರುಗಳನ್ನು ನೀಡಿದ್ದರು. ಎಂಎನ್ ಸಿ ಕಂಪನಿಗಳು ಸಿದ್ಧ ಮಾಡಿದ ಪಿಫ್ಜರ್ ನಂಥ (Pfizer ) ಲಸಿಕೆ ಭಾರತದ ಲಸಿಕೆಯ ವಿರುದ್ಧ ಹೋಗಿದ್ದವು. ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಸಹ ಇದೇ ರೀತಿ ಮಾಡಲಾಯಿತು. ಕೋವ್ಯಾಕ್ಸಿನ್ ಗೆ ವಿಶ್ವ ಮಾನ್ಯತೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು ಎಂದು ಹೇಳಿದರು.
ಇಲ್ಲಿ ತೆಲುಗು ಜನರ ಹಿರಿಮೆಯನ್ನು ಎತ್ತಿ ಹಿಡಿಯುವ ಅಗತ್ಯವಿದೆ. ಒಬ್ಬ ತೆಲುಗಿನ ವ್ಯಕ್ತಿ ಮತ್ತೊಬ್ಬ ತೆಲುಗಿನ ವ್ಯಕ್ತಿಗೆ ಜಗತ್ತಿನ ಯಾವುದೇ ಕಡೆಯಲ್ಲಿದ್ದರೂ ಪ್ರೋತ್ಸಾಹಿಸಬೇಕು. ನಮ್ಮ ನಡುವೆ ಒಗ್ಗಟ್ಟಿರಬೇಕು ಎನ್ನುವುದನ್ನು ಎಲ್ಲರೂ ನೆನಪಲ್ಲಿಟ್ಟುಕೊಳ್ಳಬೇಕು. ನಮ್ಮ ತೆಲುಗು ಭಾಷೆ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಪ್ರಚಾರ ಮಾಡಬೇಕು ಎಂದು ಸಿಜಿಐ ಹೇಳಿದರು.
Omicron Outbreak: ಈ ಲಸಿಕೆ ಪಡೆದವರಿಗೆ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್!
ರಾಮನೇನಿ ಫೌಂಡೇಷನ್ ಪುರಸ್ಕಾರಂ 2020&2021 ಅನ್ನು ಡಿಸೆಂಬರ್ 23 ರಂದು ಅದ್ದೂರಿಯಾಗಿ ಆಚರಣೆ ಮಾಡಿತು. ಅಮೆರಿಕ ಮೂಲದ ರಾಮನೇನಿ ಫೌಂಡೇಷನ್, 2021ರ ವಿಶಿಷ್ಟ ಪುರಸ್ಕಾರ ಪ್ರಶಸ್ತಿಯನ್ನು ಭಾರತ್ ಬಯೋಟೆಕ್ ಸಂಸ್ಥೆಗೆ ನೀಡಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಜೆಐ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತ್ ಬಯೋಟೆಕ್ ಗೆ ಅಲ್ಲದೆ, ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಸೋನು ಸೂದ್ (Sonu Sood) ಅವರಿಗೆ "ಪ್ರತ್ಯೇಕ ಪುರಸ್ಕಾರಮ್-2020" ಅನ್ನು ನೀಡಿತು. ಸಮಾಜಕ್ಕೆ ಅವರು ಮಾಡಿದ ಸೇವೆಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
Covid 19 Variant: ಒಮಿಕ್ರೋನ್ ಭೀತಿ: ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಪ್ರಭಾವಿಗಳು!
"ಭಾರತ್ ಬಯೋಟೆಕ್ ತನ್ನ ನಾವಿನ್ಯತೆಯಿಂದಾಗಿ ನಿಂತಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾವು ಜಗತ್ತಿನಲ್ಲಿ ನಾಯಕರಾಗಿದ್ದೇವೆ. ನಮ್ಮ ಸಮಾಜದ ಕಡೆಗೆ ಅವರ ಪ್ರಯತ್ನಗಳಿಗಾಗಿ ಎಲ್ಲಾ ಸ್ಪೂರ್ತಿದಾಯಕ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡಲು ನನಗೆ ಸಂತೋಷವಾಗಿದೆ" ಎಂದು ಸಿಜೆಐ ಹೇಳಿದರು. ಮಾತೃಭೂಮಿಯನ್ನು ಗೌರವಿಸಿ: ಕೋವಿಡ್-19 ಸಾಂಕ್ರಾಮಿಕ ವೈರಸ್ ಕುರಿತಾಗಿ ಮಾತನಾಡಿದ ಸಿಜೆಐ, ಇಂದು ಹಲವಾರು ರೂಪಾಂತರಗಳು ಬಂದಿವೆ. ಭಾರತೀಯ ಕಂಪನಿಯ ಲಸಿಕೆಗಳನ್ನು ಅತ್ಯುತ್ತಮವಾಗಿ ಬಳಕೆ ಮಾಡಲಾಗುತ್ತಿದೆ. ಈ ಲಸಿಕೆಯನ್ನು ತಡೆಯಲು ನಾನಾ ರೀತಿಯ ಪ್ರಯತ್ನ ಮಾಡಿದರೂ ಎಲ್ಲವೂ ವಿಫಲವಾಯಿತು. ಇಂದು ಇದು ಯಶಸ್ವಿ ಲಸಿಕೆಗಳಲ್ಲಿ ಒಂದಾಗಿದೆ. ನಮ್ಮ ಮಾತೃಭೂಮಿ, ಮಾತೃಭಾಷೆ ಹಾಗೂ ಮಾತೃದೇಶವನ್ನು ಅದಾ ಗೌರವಿಸಬೇಕು ಎಂದು ಹೇಳಿದರು.