ನಟರನ್ನು ತಡೆದ ಡಿಕೆಶಿ ವಿರುದ್ಧ ಆಕ್ರೋಶ

Published : Nov 27, 2018, 07:50 AM ISTUpdated : Nov 27, 2018, 07:59 AM IST
ನಟರನ್ನು ತಡೆದ ಡಿಕೆಶಿ ವಿರುದ್ಧ ಆಕ್ರೋಶ

ಸಾರಾಂಶ

ನಟ ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಪ್ರೊಟೊಕಾಲ್ ಪ್ರಕಾರ ಹಿರಿಯರು ಹಾಗೂ ಗಣ್ಯರನ್ನು ಕರೆಯಲಾಗುತ್ತಿತ್ತು. ಈ ವೇಳೆ ಕೆಲವು ನಟರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನಗೊಂಡಿದ್ದರು. 

ಬೆಂಗಳೂರು :  ನಟ ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಪ್ರೊಟೊಕಾಲ್ ಪ್ರಕಾರ ಹಿರಿಯರು ಹಾಗೂ ಗಣ್ಯರನ್ನು ಕರೆಯಲಾಗುತ್ತಿತ್ತು. ಈ ವೇಳೆ ಪಟ್ಟಿಯಲ್ಲಿ ಹಠಾತನೆ ಮುಖ್ಯಮಂತ್ರಿ ಪುತ್ರ ನಿಖಿಲ್ ಅವರ ಹೆಸರು ಕರೆದು ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. 

ಬಳಿಕ ವಿಧಿ ವಿಧಾನ   ಪೂರೈಸಲು ಸಮಯವಕಾಶ ಬೇಕು ಎಂಬ ಕಾರಣ ನೀಡಿ ಕೆಲವು ಖ್ಯಾತ ನಟರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ ಸಚಿವ ಡಿ.ಕೆ. ಶಿವಕುಮಾರ್ ತಡೆದರು. ಇದರಿಂದ ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಬೇಕಾದವರಿಗೆ ಬಿಟ್ಟರೆ ಹೇಗೆ ಎಂದು ಪಾರ್ಥಿವ ಶರೀರದ ಎದುರೇ ಗಲಾಟೆ ಮಾಡಿದರು. 

ಹೀಗಾಗಿ ಮತ್ತೊಂದು ಸುತ್ತು ಎಲ್ಲಾ ಕಲಾವಿದರನ್ನು ಅಂಬರೀಷ್ ಅವರನ್ನು ಪ್ರದಕ್ಷಿಣೆ ಮಾಡಿ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ