ಮನ್ಸೂರ್ ಮನೆ ಈಜುಕೊಳದಲ್ಲಿ 303 ಕೇಜಿ ಚಿನ್ನ

By Web DeskFirst Published Aug 8, 2019, 8:07 AM IST
Highlights

ಮಹಮ್ಮದ್‌ ಮನ್ಸೂರ್‌ ಖಾನ್‌ ಈಜು ಕೊಳದಲ್ಲಿ ಅವಿತಿಟ್ಟಿದ್ದ ಸುಮಾರು 303 ಕೆ.ಜಿ. ತೂಕದ 5,880 ನಕಲಿ ಚಿನ್ನದ ಗಟ್ಟಿ(ಬಿಸ್ಕತ್ತು)ಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಜಪ್ತಿ ಮಾಡಿದೆ.

ಬೆಂಗಳೂರು [ಆ.08]:  ಐಎಂಎ ಬಹುಕೋಟಿ ವಂಚಕ ಮಹಮ್ಮದ್‌ ಮನ್ಸೂರ್‌ ಖಾನ್‌ ಈಜು ಕೊಳದಲ್ಲಿ ಅವಿತಿಟ್ಟಿದ್ದ ಸುಮಾರು 303 ಕೆ.ಜಿ. ತೂಕದ 5,880 ನಕಲಿ ಚಿನ್ನದ ಗಟ್ಟಿ(ಬಿಸ್ಕತ್ತು)ಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜಪ್ತಿ ಮಾಡಿದೆ.

ಬುಧವಾರ ಮಧ್ಯಾಹ್ನ ಬೆಂಗಳೂರಿನ ರಿಚ್‌ಮಂಡ್‌ ಟೌನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಮಹಡಿಯಲ್ಲಿ ಈಜು ಕೊಳದಲ್ಲಿ ಇಡಲಾಗಿದ್ದ ನಕಲಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಅದು ನಕಲಿ ಎಂದು ತಿಳಿದು ಬಂದಿದೆ. ಐಎಂಎ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ನನ್ನು ಎಸ್‌ಐಟಿ ತಂಡ ವಿಚಾರಣೆಗೆ ಒಳಪಡಿಸಿದ್ದ ವೇಳೆ ‘ಚಿನ್ನದ ಗಟ್ಟಿಗಳನ್ನು ತೋರಿಸಿ ಹಣ ಹೂಡಿಕೆ ಮಾಡುವಂತೆ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದೆ. ರಿಚ್‌ಮಂಡ್‌ಟೌನ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ ಮಹಡಿಯಲ್ಲಿರುವ ಈಜು ಕೊಳದಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಅವಿತಿಟ್ಟಿದ್ದೇನೆ’ ಎಂದು ಬಾಯ್ಬಿಟ್ಟಿದ್ದ.

ಈ ಮಾಹಿತಿ ಆಧರಿಸಿ ವಿಶೇಷ ತನಿಖಾ ತಂಡ ಆರೋಪಿಯ ಅಪಾರ್ಟ್‌ಮೆಂಟ್‌ನ ಈಜು ಕೊಳದಲ್ಲಿದ್ದ ಸುಮಾರು 303 ಕೆ.ಜಿ.ಯ 5,580 ಚಿನ್ನದ ಬಿಸ್ಕತ್‌ಗಳನ್ನು ಹೊರ ತೆಗೆದು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.

click me!