ಆರ್ ಬಿಐ ಗವರ್ನರ್ ನೆರವಿಗೆ ಧಾವಿಸಿದ ಮನಮೋಹನ್ ಸಿಂಗ್

By Suvarna web DeskFirst Published Jan 18, 2017, 2:29 PM IST
Highlights

ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಥಾಸ್ಥಿತಿಗೆ ತರಲು ಸಮಯ ನಿಗದಿಪಡಿಸದಿದ್ದರಿಂದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಂಸದರಿಂದ ಟೀಕಾಸ್ತ್ರಗಳಿಗೆ ಗುರಿಯಾಗಬೇಕಾಯಿತು.

ನವದೆಹಲಿ (ಜ.18): ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಥಾಸ್ಥಿತಿಗೆ ತರಲು ಸಮಯ ನಿಗದಿಪಡಿಸದಿದ್ದರಿಂದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಂಸದರಿಂದ ಟೀಕಾಸ್ತ್ರಗಳಿಗೆ ಗುರಿಯಾಗಬೇಕಾಯಿತು.

ನೋಟು ಅಮಾನ್ಯದ ನಂತರ 9.2 ಲಕ್ಷ ಕೋಟಿ ಮರಳಿದೆ ಎಂದು ಊರ್ಜಿತ್ ಪಟೇಲ್ ಹೇಳಿದ್ದಾರೆ.  ಸಂಸದೀಯ ಸಮಿತಿ ಸಭೆಯಲ್ಲಿ ಊರ್ಜಿತ್ ಪಟೇಲ್ ಸಂಸದರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮಧ್ಯ ಪ್ರವೇಶಿಸಿ ಆರ್ ಬಿಐ ಗೆ ಗೌರವಿಸಬೇಕು ಎಂದು ಹೇಳಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ಊರ್ಜಿತ್ ಪಟೇಲ್ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದೆ. ಜೊತೆಗೆ ವಿತ್ ಡ್ರಾ ಮಿತಿಯನ್ನು ಯಥಾಸ್ಥಿತಿಗೆ ತರಬೇಕೆಂದು ಸರ್ಕಾರಕ್ಕೆ ಕೇಳಿಕೊಂಡಿದೆ.

click me!