ಹೆಂಡತಿ ಸಹಕರಿಸದ್ದಕ್ಕೆ ಗಂಡನ ಅಪಹರಣ!

Published : Jan 18, 2017, 02:10 PM ISTUpdated : Apr 11, 2018, 01:11 PM IST
ಹೆಂಡತಿ ಸಹಕರಿಸದ್ದಕ್ಕೆ ಗಂಡನ ಅಪಹರಣ!

ಸಾರಾಂಶ

ಕೋಲ್ಕತ್ತಾ ಮೂಲದ ಮುಜು ಎಂಬ ಕಾಂಟ್ರಾಕ್ಟರ್ ಬಳಿ ದಂಪತಿ ಕೆಲಸ ಮಾಡ್ತಾ ಇದ್ದರು. ಈ ವೇಳೆ ಕಾಂಟ್ರಾಕ್ಟರ್  ಮುಜು, ಕೆಲಸಗಾರನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಅಲ್ಲದೆ ಲೈಂಗಿಕ ಸಂಬಂಧಕ್ಕೂ ಪುಸಲಾಯಿಸಿದ್ದಾನೆ.

ಬೆಂಗಳೂರು (ಜ.18): ಲೈಂಗಿಕ ಸಂಬಂಧಕ್ಕೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಗಂಡನನ್ನೇ ಅಪಹರಿಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ಬೆಳಕಿಗೆ ಬಂದಿದೆ.

ಪತಿಯ ಅಪಹರಣದಿಂದ ನೊಂದ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೋಲ್ಕತ್ತಾ ಮೂಲದ ಮುಜು ಎಂಬ ಕಾಂಟ್ರಾಕ್ಟರ್ ಬಳಿ ದಂಪತಿ ಕೆಲಸ ಮಾಡ್ತಾ ಇದ್ದರು. ಈ ವೇಳೆ ಕಾಂಟ್ರಾಕ್ಟರ್  ಮುಜು, ಕೆಲಸಗಾರನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಅಲ್ಲದೆ ಲೈಂಗಿಕ ಸಂಬಂಧಕ್ಕೂ ಪುಸಲಾಯಿಸಿದ್ದಾನೆ.

ಆದರೆ ಮಾಲಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮಜು, ಗೌತಮ್, ಸಂಜಯ್ ಸೇರಿದಂತೆ 6 ಜನರ ತಂಡ ಆಕೆಯ ಪತಿಯನ್ನೇ ಜನವರಿ 11ರಂದು ಅಪಹರಿಸಿದ್ದಾರೆ. ಪತಿ ನಾಪತ್ತೆ ಬಗ್ಗೆ ಪತ್ನಿ ಮಾಲಾ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಆದರೆ ಅಪಹರಣಗೊಂಡಿರುವ ಪತಿ​ ಮಾತ್ರ ಪತ್ತೆಯಾಗಿಲ್ಲ. ಇದರಿಂದ ನೊಂದ ಪತ್ನಿ ತನ್ನ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!