
ಮಂಗಳೂರು (ಜ.23): ಮಂಗಳೂರಿನಲ್ಲಿ ನಡೆದ ಲವ್ ಜಿಹಾದ್ ಆರೋಪ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು, ಮುಂಬೈ ಹೈಕೋರ್ಟ್ಗೆ ಹಾಜರಾದ ಯುವತಿ ನಾನು ಸ್ವಇಚ್ಛೆಯಿಂದ ಮುಂಬೈಗೆ ಬಂದಿದ್ದಾಗಿ ಮುಂಬೈ ಹೈಕೋರ್ಟ್ಗೆ ಅಫಡವಿಟ್ ಸಲ್ಲಿಸಿದ್ದಾಳೆ.
ಯುವತಿ ಆಸೆಯಂತೆ ಹೆತ್ತವರ ಜತೆ ತೆರಳಲು ಕೋರ್ಟ್ ಸಮ್ಮತಿ ನೀಡಿ, ಆದೇಶ ಹೊರಡಿಸಿದೆ. ಯುವತಿಯನ್ನು ಅಪಹರಿಸಿದ್ದಾಗಿ ಪೋಷಕರು ಕೇಸ್ ದಾಖಲಿಸಿದ್ದರು. ಇನ್ನೂ ಯುವತಿ ಕರೆದುಕೊಂಡು ಹೋಗಿದ್ದ ಮೊಹಮ್ಮದ್ ಇಕ್ಬಾಲ್ ಕೂಡ ಅವಳನ್ನು ಅಪಹರಿಸಿದ್ದಾಗಿ ಮುಂಬೈನ ವಾಶಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ಆದ್ರೆ, ಮೊಹಮ್ಮದ್ ಇಕ್ಬಾಲ್ ದೂರಿನ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಮುಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ಯುವತಿ ಅನ್ಯ ಕೋಮಿನ ಯುವಕನ ಜತೆ ಮುಂಬೈಗೆ ತೆರಳಿದ್ದಳು. ಆಗ ಹಿಂದೂಪರ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.