ಪೌರತ್ವ ಮಸೂದೆ ವಿರೋಧಿಸಿದ ದೇಶದೆಲ್ಲೆಡೆ ಹಿಂಸಾಚಾರ ತೀವ್ರಗೊಂಡಿದೆ. ಇದೀಗ ಪ್ರತಿಭಟನಾಕಾರರಿಗೆ ಇನ್ಸ್‌ಪೆಕ್ಟರ್ ತನ್ವೀರ್ ಅಹಮ್ಮದ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಾವು ಮತ್ತೆ ಮೇಲೆದ್ದು ಬರುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ಸಂಚಲನ ಮೂಡಿಸಿದೆ. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್'ಗೆ ಜೀವಾವಧಿ ಶಿಕ್ಷೆ, ಕಿಚ್ಚ ಸುದೀಪ್ ದಬಾಂಗ್ 3ಗೆ ಜೈ ಎಂದ ಫ್ಯಾನ್ಸ್ ಸೇರಿದಂತೆ ಡಿ.20ರ ಟಾಪ್ 10 ಸುದ್ದಿ ಇಲ್ಲಿವೆ.
'ನನ್ನ ಹೆಸರು ತನ್ವೀರ್ ಅಹಮದ್’ ಪ್ರತಿಭಟನಾಕಾರರಿಗೆ ಖಡಕ್ ಕ್ಲಾಸ್
undefined
ನನ್ನ ಹೆಸರು ತನ್ವೀರ್ ಅಹಮದ್. ನಾನು ಪೊಲೀಸ್ ಇನ್ಸಪೆಕ್ಟರ್ .. ನೀವು ನಿಮ್ಮ ಉದ್ದೇಶಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ದಯವಿಟ್ಟು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉನ್ನಾವೋ ಅತ್ಯಾಚಾರ: ಉಚ್ಛಾಟಿತ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ!
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್'ಗೆ ಜೀವಾವಧಿ ಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ನ್ಯಾಯಾಧೀಶರು ತೀರ್ಪು ಓದುತ್ತಿದ್ದಂತೇ ಕುಲದೀಪ್ ಸೆಂಗರ್ ನ್ಯಾಯಾಲಯದಲ್ಲೇ ಕಣ್ಣೀರಿಟ್ಟರು.
ನಾವು ಮತ್ತೆ ಮೇಲೆದ್ದು ಬರುತ್ತೇವೆ: ಸಣ್ಣ ಧ್ವನಿಯಲ್ಲಿ ಮೋದಿ ಅಂದಿದ್ದೇನು?...
ಯಾವುದೇ ಆತಂಕವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡು ಹೂಡಿಕೆ ಮಾಡುವಂತೆ ಭಾರತೀಯ ಉದ್ಯಮ ವಲಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರ ಹೂಡಿಕೆಗೆ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಅತಿ ಹೆಚ್ಚು ಸಂಬಳ ಕೊಡುವ ನಗರ: ಬೆಂಗಳೂರು ನಂ.1!
ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗೆ ದೇಶದಲ್ಲೇ ಅತಿ ಹೆಚ್ಚು ಸಂಬಳ ಕೊಡುವ ನಗರ ಎಂಬ ಹಿರಿಮೆಗೆ ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಸತತ ಮೂರನೇ ವರ್ಷವೂ ಪಾತ್ರವಾಗಿದೆ. ಬೇರೆಲ್ಲಾ ಕೆಲಸಗಳಿಗೆ ಹೋಲಿಸಿದರೆ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ದೇಶದಲ್ಲಿ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಈ ಅಧಿಕಾರಿ ಹಾಡು ಕೇಳಿ ಧರಣಿ ಕೈಬಿಟ್ಟ ಪ್ರತಿಭಟನಾಕಾರರು: ಯಾವ ಹಾಡು?
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸ್ ದೌರ್ಜನ್ಯಕ್ಕೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದರಂತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.
ಮಂಗಳೂರಲ್ಲಿ ಎಲ್ಲ ಪೆಟ್ರೋಲ್ ಬಂಕ್ ಬಂದ್..!
ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಮಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಕರ್ಫ್ಯೂ ಜಾರಿ ಮಾಡಲಾಗಿದ್ದು, ಇದೀಗ ಮುಂಜಾಗೃತಾ ಕ್ರಮವಾಗಿ ಎಲ್ಲಾ ಪೆಟ್ರೋಲ್ ಬಂಕ್‌ಗಳನ್ನೂ ಬಂದ್ ಮಾಡಲಾಗಿದೆ.
ಅತಿ ಹೆಚ್ಚು ಸಂಭಾವನೆ: ವಿರಾಟ್, ಅಕ್ಷಯ್, ಸಲ್ಲು ಟಾಪ್ 3 ಸೆಲೆಬ್ರಿಟಿಗಳು
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಈ ವರ್ಷದ ಅತಿ ಹೆಚ್ಚು ಸಂಭಾವನೆ ಪಡೆಯುವ ಫೋಬ್ಸ್‌ರ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ.
ನಿರೀಕ್ಷೆ ಸುಳ್ಳು ಮಾಡದ ದಬಾಂಗ್ 3; ಸುದೀಪ್ ಸಖತ್ ಸ್ಟೈಲ್‌ಗೆ ಜೈ ಎಂದ ಪ್ರೇಕ್ಷಕರು!
ಬಾಲಿವುಡ್ ಸುಲ್ತಾನ್ ಹಾಗೂ ಕನ್ನಡದ ಪೈಲ್ವಾನ್ ಅಭಿನಯದ ದಬಾಂಗ್ 3 ಸಿನಿಮಾ ರಿಲೀಸ್ ಆಗಿದೆ ...ಕನ್ನಡದಲ್ಲಿಯೂ ಡಬ್ಬಿಂಗ್ ಆಗಿ ಚಿತ್ರ ತೆರೆಗೆ ಬಂದಿದ್ದು ಡಬ್ಬಿಂಗ್ ಸಿನಿಮಾಗೆ ಪ್ರೇಕ್ಷಕ ಪ್ರಭು ಅಸ್ತು ಅಂದಿದ್ದಾನೆ.
ನಮ್ಮಲ್ಲಿ ರಿವಾಲ್ವರ್‌ಗಳಿವೆ ಅವುಗಳಿಗೆ ಪೂಜೆ ಮಾಡಬೇಕಾ? ಎಂದ ಕೇಂದ್ರ ಸಚಿವ...
ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಸೇರಿಕೊಂಡು ದೇಶದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಿವೆ. ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಎಲ್ಲರೂ ಶಾಂತಿ ಕಾಪಾಡಬೇಕು ಅಂತ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಇಲ್ಲೇ ಸಾಯ್ತಿನಿ, ಆದ್ರೆ ಪಾಕ್ ಎಂಬ ನರಕಕ್ಕೆ ಮತ್ತೆ ಹೋಗುವುದಿಲ್ಲ: ಮಂಗಲ್‌ದಾಸ್!...
ಪಾಕಿಸ್ತಾನದಿಂದ ಓಡಿ ಬಂದು ಭಾರತದಲ್ಲಿ ಹಲವು ಜನರು ಆಶ್ರಯ ಪಡೆದಿದ್ದಾರೆ. ಇದುವರೆಗೂ ಸುಮಾರು ಏಳು ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಹಿಂದೂ ಕುಟುಂಬ ಭಾರತದಲ್ಲಿ ಆಶ್ರಯ ಪಡೆದಿದೆ. ಅವರಲ್ಲಿ ದೆಹಲಿಯ ಮಜ್ನು ಕಾ ಟೀಲಾ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಮಂಗಲ್‌ದಾಸ್, ಏಶಿಯಾನೆಟ್ ನ್ಯೂಸ್ ಕನ್ನಡದೊಂದಿಗೆ ಸಂವಾದ ನಡೆಸಿದ್ದಾರೆ.