ಮುಂಬೈ (ಡಿ. 20): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಸಲ್ಮಾನ್‌ ಖಾನ್‌ ಈ ವರ್ಷದ ಅತಿ ಹೆಚ್ಚು ಸಂಭಾವನೆ ಪಡೆಯುವ ಫೋಬ್ಸ್‌ರ್‍ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ.

ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಪಟುವೊಬ್ಬರು, ಬಾಲಿವುಡ್‌ ತಾರೆಯರನ್ನು ಹಿಂದಿಕ್ಕಿದ್ದಾರೆ. ಜೊತೆಗೆ ಇದೇ ಮೊದಲ ಬಾರಿ ಅಗ್ರ 10ರ ಪಟ್ಟಿಯಲ್ಲಿ ಇಬ್ಬರು ನಟಿಯರು ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿರುವ ಮೂರರಲ್ಲಿ ಒಬ್ಬರು ಮಹಿಳಾ ಸೆಲೆಬ್ರಿಟಿ ಆಗಿದ್ದಾರೆ. ಈ ಬಾರಿ ದಕ್ಷಿಣ ಭಾರತದ 13 ಸೆಲೆಬ್ರಿಟಿಗಳು ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

IPL 2020: ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಫುಲ್ ಲಿಸ್ಟ್!

2018 ಅ.1ರಿಂದ 2019 ಸೆ.30 ಅವಧಿಯಲ್ಲಿ ವೃತ್ತಿ ಹಾಗೂ ಜಾಹೀರಾತಿನ ಮೂಲಕ ಗಳಿಸಿದ ಆದಾಯ ಮತ್ತು ಅವರ ಖ್ಯಾತಿ ಮಾನದಂಡನ್ನಾಗಿ ಇರಿಸಿಕೊಂಡು ಈ ಪಟ್ಟಿಬಿಡುಗಡೆ ಮಾಡಲಾಗಿದೆ. ಕ್ರಿಕೆಟಿಗ ವಿರಾಟ್‌ ಕೊಹ್ಲಿ 252 ಕೋಟಿ ರು.ಗಳಿಕೆಯೊಂದಿಗೆ ಮೊದಲ ಸ್ಥಾನ, ಅಕ್ಷಯ್‌ ಕುಮಾರ್‌ 293 ಕೋಟಿ ರು. ಆದಾಯದೊಂದಿಗೆ 2ನೇ ಸ್ಥಾನ, ಸಲ್ಮಾನ್‌ ಖಾನ್‌ 229 ಕೋಟಿ ರು.ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ನಟ ಅಮಿತಾಭ್‌ ಬಚ್ಚನ್‌ ಹಾಗೂ ಕ್ರಿಕೆಟಿಗ ಎಂ.ಎಸ್‌. ಧೋನಿ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅಗ್ರ 10 ಪಟ್ಟಿಯಲ್ಲಿ ಇಬ್ಬರು ಮಹಿಳೆಯರು ಸ್ಥಾನ ಪಡೆದಿದ್ದು, ಆಲಿಯಾ ಭಟ್‌ 8ನೇ ಹಾಗೂ ದೀಪಿಕಾ ಪಡುಕೋಣೆ ಅವರಿಗೆ 10ನೇ ಸ್ಥಾನ ಲಭ್ಯವಾಗಿದೆ.

ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಕ್ರಿಕೆಟಿಗರಿವರು

ಅಗ್ರ ಸೆಲೆಬ್ರಿಟಿಗಳು

1 ವಿರಾಟ್‌ ಕೊಹ್ಲಿ (252 ಕೋಟಿ ರು.)

2.ಅಕ್ಷಯ್‌ ಕುಮಾರ್‌ (293 ಕೋಟಿ ರು.)

3. ಸಲ್ಮಾನ್‌ ಖಾನ್‌ (229 ಕೋಟಿ ರು.)

4. ಅಮಿತಾಭ್‌ ಬಚ್ಚನ್‌ (239 ಕೋಟಿ ರು.)

5. ಎಂ.ಎಸ್‌. ಧೋನಿ (135 ಕೊಟಿ ರು.)

ಡಿಸೆಂಬರ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ