ಸಾಲ ಮನ್ನಾ ಆಗಲಿಲ್ಲವೆಂದು ಮಂಡ್ಯದ ರೈತ ಆತ್ಮಹತ್ಯೆ

Published : Mar 15, 2017, 02:08 PM ISTUpdated : Apr 11, 2018, 12:47 PM IST
ಸಾಲ ಮನ್ನಾ ಆಗಲಿಲ್ಲವೆಂದು ಮಂಡ್ಯದ ರೈತ ಆತ್ಮಹತ್ಯೆ

ಸಾರಾಂಶ

ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಜೀವಹಿಡಿದುಕೊಂಡಿದ್ದ ಪ್ರಕಾಶ್, ಬಜೆಟ್'ನಲ್ಲಿ ಅಂಥದ್ದೊಂದು ನಿರ್ಧಾರ ಬರದೇಹೋದ್ದರಿಂದ ಹತಾಶೆಗೊಂಡು ಸಾವಿಗೆ ಶರಣಾಗಿರುವ ಶಂಕೆ ಇದೆ.

ಮಂಡ್ಯ(ಮಾ. 15): ಈ ಬಾರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್'ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಆಗದಿದ್ದರಿಂದ ನಿರಾಶೆಗೊಂಡು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಈ ಬಾರಿಯ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯ ರೈತ ಜನ್ರ ಆತ್ಮಹತ್ಯೆ ಕಂಡು ಸರ್ಕಾರ ರೈತ್ರ ಸಾಲ ಮನ್ನಾ ಮಾಡಲಿದೆ ಎಂಬ ಭರವಸೆಯನ್ನು ಜಿಲ್ಲೆಯ ರೈತ್ರು ಇಟ್ಕೊಂಡಿದ್ರು. ಆದ್ರೆ ಬಜೆಟ್ ನಲ್ಲಿ  ಸಾಲ ಮನ್ನಾ ಕುರಿತು ಯಾವುದೇ ವಿಷಯ ಪ್ರಸ್ತಾಪವಾಗದ ಹಿನ್ನೆಲೆಯಲ್ಲಿ ಮಂಡ್ಯ  ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಪ್ರಕಾಶ್(30) ಎಂಬ ರೈತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಮೃತ ರೈತನ ಸಾವಿಗೆ ಸಾಲಬಾಧೆಯೇ ಕಾರಣವೆಂದು ಹೇಳಲಾಗುತ್ತಿದೆ. ತನ್ನ ಒಂದು ಎಕರೆ ಜಮೀನು ಪ್ರದೇಶದಲ್ಲಿ ಈ ರೈತ ಕೃಷಿಗಾಗಿ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್'ನಿಂದ ಸುಮಾರು 5 ಲಕ್ಷ ರೂ ಸಾಲ ಮಾಡಿದ್ದನೆನ್ನಲಾಗಿದೆ. ಅಲ್ಲದೆ ಇತ್ತಿಚೆಗೆ ಜಮೀನನಲ್ಲಿ ಬೋರ್ವೆಲ್ ತೋಡಿಸಿದ್ರು ನೀರು ಬರದೆ ಇದ್ದಿದ್ರಿಂದ ರೈತ ಹತಾಶೆಗೊಂಡಿದ್ದ. ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಜೀವಹಿಡಿದುಕೊಂಡಿದ್ದ ಪ್ರಕಾಶ್, ಬಜೆಟ್'ನಲ್ಲಿ ಅಂಥದ್ದೊಂದು ನಿರ್ಧಾರ ಬರದೇಹೋದ್ದರಿಂದ ಹತಾಶೆಗೊಂಡು ಸಾವಿಗೆ ಶರಣಾಗಿರುವ ಶಂಕೆ ಇದೆ.

ಮೃತ ರೈತ ಪ್ರಕಾಶ್'ನ ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್
ಲಕ್ಸುರಿ ಕಾರು, 1 ಕೇಜಿ ಚಿನ್ನ 100 ಕೋಟಿ ಆಸ್ತಿ: ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ