ಸ್ವಾತಂತ್ರ್ಯಾನಂತರ ನಡೆದ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶ್ಯಾಮ್‌ಸರಣ್ ನೇಗಿ ಮತ ಹಾಕಿದ್ದರು. ಇದು ಆ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮೊದಲ ಮತ ಎಂದು ದಾಖಲಾಗಿತ್ತು.
ಶಿಮ್ಲಾ(ಜು.02): ಸ್ವತಂತ್ರ್ಯ ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆ ಹೊಂದಿರುವ ಹಿಮಾಚಲಪ್ರದೇಶದ ಕಿನ್ನೌರ್ ಜಿಲ್ಲೆಯ ಶ್ಯಾಮ್‌ಸರಣ್ ನೇಗಿಗೆ ಶನಿವಾರ 100 ವರ್ಷ ತುಂಬಿತು.
ಸ್ವಾತಂತ್ರ್ಯಾನಂತರ ನಡೆದ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶ್ಯಾಮ್‌ಸರಣ್ ನೇಗಿ ಮತ ಹಾಕಿದ್ದರು. ಇದು ಆ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮೊದಲ ಮತ ಎಂದು ದಾಖಲಾಗಿತ್ತು.
2010ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತ ಅವರು ಕಿನ್ನೌರ್‌ಗೆ ತೆರಳಿ ನೇಗಿಯನ್ನು ಸನ್ಮಾನಿಸಿ ಬಂದಿದ್ದರು. ಜೊತೆಗೆ 2014ರಲ್ಲಿ ರಾಜ್ಯ ಚುನಾವಣಾ ಆಯೋಗ ನೇಗಿ ಅವರನ್ನು ಚುನಾವಣಾ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿತ್ತು. ಇದುವರೆಗೆ ನೇಗಿ 16 ಲೋಕಸಭಾ ಚುನಾವಣೆಗಳಲ್ಲಿ, 12 ವಿಧಾನಸಭಾ ಚುನಾವಣೆಗಳಲ್ಲಿ ಮತ ಹಾಕಿದ್ದಾರೆ.